ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಪಳ್ಳತ್ತಡ್ಕ ನಿಸಾ ಮಂಜಿಲ್‍ನ ಬಾಗಿಲು ಒಡೆದು ನುಗ್ಗಿದ ಕಳ್ಳರು 60ಪವನು ಚಿನ್ನ ಹಾಗೂ ನಗದು ಕಳವುಗೈದಿದ್ದಾರೆ. ಇಲ್ಲಿನ ನಿವಾಸಿ ಅಬ್ದುಲ್ ರಜಾಕ್ ಎಂಬವರ ಮನೆಯಿಂದ ಈ ಕಳವು ನಡೆದಿದೆ. ಅಬ್ದುಲ್ ರಜಾಕ್ ಅವರ ಪುತ್ರಿ ಹಾಗೂ ಅಳಿಯ ವಿದೇಶಕ್ಕೆ ತೆರಳುವ ಹಿನ್ನೆಲೆಯಲ್ಲಿ ಅಬ್ದುಲ್‍ರಜಾಕ್ ಮನೆಯವರೆಲ್ಲರೂ ಪುತ್ರಿ ಮನೆಗೆ ತೆರಳಿದ್ದು, ಸೋಮವಾರ ಬೆಳಗ್ಗೆ ವಾಪಸಾಗುವಾಗ ಕಳವು ಬೆಳಕಿಗೆ ಬಂದಿದೆ.ಮನೆಯ ಎದುರಿನ ಬಾಗಿಲು ಒಡೆದು ನುಗ್ಗಿದ ಕಳ್ಳರುಮನೆಯೊಳಗಿನ ಕೊಠಡಿಯಲ್ಲಿದ್ದ ನಾಲ್ಕು ಕಪಾಟುಗಳ ಬೀಗವನ್ನೂ ಒಡೆದಿದ್ದಾರೆ.ಎರಡು ಕಪಾಟಿನಲ್ಲಿದ್ದ 60ಪವನು ಚಿನ್ನ ಹಾಗೂ ನಗದು ದೋಚಲಾಗಿದೆ. ಮನೆಯವರು ಬೀಗ ಹಾಕಿ ಹೊರ ತೆರಳಿರುವ ಬಗ್ಗೆ ಮಾಹಿತಿಯುಳ್ಳವರು ಕೃತ್ಯವೆಸಗಿರಬೇಕೆಂದು ಸಂಶಯಿಸಲಾಗಿದೆ. ಬದಿಯಡ್ಕ ಠಾಣೆ ಪೊಲೀಸರು ಕೇಸು ದಆಖಲಿಸಿಕೊಮಡಿದ್ದಾರೆ. ಎಸ್.ಐ ವಿನೋದ್‍ಕುಮಾರ್ ನೇತೃತ್ವದ ಪೊಲೀಸರ ತಂಡ, ಬೆರಳಚ್ಚು, ಶ್ವಾನದಳ ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದೆ. ಮನೆ ಸನಿಹದ ಸಿಸಿ ದೃಶ್ಯಾವಳಿಗಳನ್ನು ಪೊಲೀಸರು ಸಂಗ್ರಹಿಸಿ ತನಿಖೆ ಮುಂದುವರಿಸಿದ್ದರೆ.
ಪಳ್ಳತ್ತಡ್ಕದಲ್ಲಿ ಮನೆಬಾಗಿಲು ಒಡೆದು ನುಗ್ಗಿದ ಕಳ್ಳರು-60ಪವನು ಚಿನ್ನ, ನಗದು ಕಳವು
0
ಮಾರ್ಚ್ 06, 2023
Tags