ನವದೆಹಲಿ :ಶೇರು ಆಧಾರಿತ 7,374 ಕೋ.ರೂ.ಗಳ ಸಾಲವನ್ನು ತಾನು ಅವಧಿಗೆ ಮುನ್ನವೇ ಮರುಪಾವತಿಸಿರುವುದಾಗಿ ಅದಾನಿ ಗ್ರೂಪ್ ತಿಳಿಸಿದೆ. ನಿಗದಿಯಂತೆ ಈ ಸಾಲವನ್ನು 2025,ಎಪ್ರಿಲ್ ನಲ್ಲಿ ಮರುಪಾವತಿಸಬೇಕಿತ್ತು.
ಇದು ತನ್ನ ಕಂಪನಿಗಳ ಶೇರುಗಳನ್ನು ಅಡವಿಟ್ಟು ಪ್ರವರ್ತಕರು ಪಡೆದಿರುವ ಸಾಲಗಳ ಪ್ರಮಾಣವನ್ನು ತಗ್ಗಿಸಲು ತನ್ನ ಬದ್ಧತೆಯ ಭಾಗವಾಗಿದೆ ಎಂದು ತಿಳಿಸಿರುವ ಅದಾನಿ ಗ್ರೂಪ್, ಹಿಂಡನ್ಬರ್ಗ್ ರೀಸರ್ಚ್ನ ವರದಿಯ ಹಿನ್ನೆಲೆಯಲ್ಲಿ ಗ್ರೂಪ್ ಕಂಪನಿಗಳ ಮೇಲಾಧಾರದಲ್ಲಿ ತನ್ನ ಒಟ್ಟು ಸಾಲಗಳಿಗೆ ಸಂಬಂಧಿಸಿದಂತೆ ಹೂಡಿಕೆದಾರರಲ್ಲಿಯ ಕಳವಳಗಳನ್ನು ಕಡಿಮೆ ಮಾಡುವುದೂ ಈ ಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದೆ.