ನವದೆಹಲಿ: ಕಳಬೆರಕೆ ಅಥವಾ ನಕಲಿ ಉತ್ಪನ್ನಗಳ್ನು ತಯಾರಿಸಿ, ಮಾರಾಟ ಮಾಡಿದ ಆರೋಪದ ಮೇಲೆ ಕೇಂದ್ರ ಸರ್ಕಾರವು ಭಾರತ ಮೂಲದ 76 ಔಷಧ ಕಂಪನಿಗಳ ಪರವಾನಗಿಯನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಕಳೆದ ವರ್ಷ ಗ್ಯಾಂಬೀಯಾದಲ್ಲಿ 70, ಉಜಬೇಕಿಸ್ತಾನದಲ್ಲಿ 19 ಮಕ್ಕಳು ಭಾರತ ಮೂಲದ ಕಂಪನಿಗಳು ತಯಾರಿಸಿದ್ದ ಔಷಧ ಸೇವನೆಯಿಂದ ಮೃತಪಟ್ಟಿದ್ದರು.
ಭಾರತವನ್ನ pharmacy of the world ಎಂದು ಕರೆಯಲಾಗುತ್ತಿತ್ತು. ಆದರೆ, ಈ ಘಟನೆಯ ನಂತರ ಸಂಪೂರ್ಣ ಚಿತ್ರಣ ಬದಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮನ್ಸುಖ್ ಮಾಂಡವೀಯಾ ಫಾರ್ಮಸಿ ಕಂಪನಿಗಳ ಪರವಾನಗಿಯನ್ನು ರದ್ದು ಮಾಡಿರುವ ಬಗ್ಗೆ ದೃಢಪಡಿಸಿದ್ದಾರೆ. ದೇಶದಲ್ಲಿ 10,500 ಸಾವಿರಕ್ಕೂ ಹೆಚ್ಚು ಔಷಧ ತಯಾರಿಸುವ ಕಂಪನಿಗಳಿದ್ದು ನಕಲಿ ಉತ್ಪನ್ನ, ಕಳಬೆರಕೆ ಮಾಡುವವರನನ್ನು ಸುಮ್ಮನೆ ಬಿಡುವ ಮಾತಿಲ್ಲ ಎಂದು ಹೇಳಿದ್ದಾರೆ.
ಕಳಬೆರೆಕೆ ಅಥವಾ ನಕಲಿ ಔಷಧ ಉತ್ಪನ್ನ ಮಾಡುತ್ತಿರುವ ಕೆಲವು ಕಂಪನಿಗಳ ಪರವಾನಗಿಯನ್ನು ರದ್ದು ಮಾಡಲಾಗಿದೆ. ಕೆಲವನ್ನು ಅಮಾನತಿನಲ್ಲಿಡಲಾಗಿದೆ, ಇನ್ನು ಕೆಲವರಿಗೆ ಕಳೆದ 15 ದಿನಗಳಿಂದ ನೋಟಿಸ್ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಭಾರತ ಮೂಲದ ಔಷಧ ಕಂಪನಿಗಳು ತಯಾರಿಸಿದ್ದ ಕೆಮ್ಮಿನ ಸಿರಪ್ ಸೇವೆನೆಯಿಂದ ಗ್ಯಾಂಬೀಯಾ, ಉಜಬೇಕಿಸ್ತಾನದಲ್ಲಿ ಸಂಭವಿಸಿದ ಮಕ್ಕಳ ಸಾವಿನ ಕುರಿತು ವಿಶ್ವ ಆರೋಗ್ಯ ಸಂಸ್ಥೆ(WHO) ಕಳವಳ ವ್ಯಕ್ತಪಡಿಸಿತ್ತು. ಇದಾದ ಬಳಿಕ ಔಷಧ ನಿಯಂತ್ರಣ ವ್ಯವಸ್ಥೆಯನ್ನು ಬಲಪಡಿಸಲು ಭಾರತ ಸರ್ಕಾರವು 650 ಕೋಟಿ ರೂಪಾಯಿ ಮೀಸಲಿಡುವುದಾಗಿ ತಿಳಿಸಿತ್ತು.