ಪೆರ್ಲ: ಸ್ವರ್ಗ ಸ್ವಾಮೀ ವಿವೇಕಾನಂದ ಎಯುಪಿ ಶಾಲೆಯ 7ನೇ ತರಗತಿ ಮಕ್ಕಳಿಗೆ ಶಾಲೆ ವತಿಯಿಂದ ವಿದಾಯ ಕೂಟ ಏರ್ಪಡಿಸಲಾಯಿತು. ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಬಿ.ಅಧ್ಯಕ್ಷತೆ ವಹಿಸಿದ್ದರು. 1ರಿಂದ 6ನೇ ತರಗತಿವರೆಗಿನ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದರು. 7ನೇ ತರಗತಿಯ ಮಕ್ಕಳು ತಮ್ಮ ಅನುಭವ ಹಂಚಿಕೊಂಡರು.
ಮಕ್ಕಳು ತಮ್ಮ ಮುಂದಿನ ವಿದ್ಯಾಭ್ಯಾಸದ ಹಂತದಲ್ಲಿ ಗಮನಿಸಬೇಕಾದ ವಿಚಾರಗಳ ಬಗ್ಗೆ ಶಿಕ್ಷಕರು ಹಿತವಚನ ನೀಡಿದರು.7ನೇ ತರಗತಿಯ ಮಕ್ಕಳು ತಮ್ಮ ಸವಿ ನೆನಪಿಗಾಗಿ ಶಾಲೆಗೆ ಫ್ಯಾನ್ ಗಳನ್ನು ಕೊಡುಗೆಯಾಗಿ ನೀಡಿದರು. 6ನೇ ತರಗತಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಿದ್ಯಾರ್ಥಿ ಯದುರಾಜ್ ಸ್ವಾಗತಿಸಿ, ಜೀವನ್ ಪಿ.ಬಿ.ವಂದಿಸಿದರು. ಧನ್ವಿ ವಿ.ಎಸ್. ನಿರೂಪಿಸಿದರು.
ಸ್ವರ್ಗ ಶಾಲೆಯ 7ನೇ ತರಗತಿ ಮಕ್ಕಳಿಗೆ ವಿದಾಯ ಕೂಟ
0
ಮಾರ್ಚ್ 24, 2023
Tags