ಜೈಪುರ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾರ್ಚ್ 8ರಂದು ರಾಜಸ್ಥಾನದಲ್ಲಿ ಮಹಿಳೆಯರು ಹಾಗೂ ಯುವತಿಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.
ಸಾಮಾನ್ಯ ಹಾಗೂ ಫಾಸ್ಟ್ ಬಸ್ ಸೇರಿದಂತೆ ರಾಜಸ್ಥಾನದ ಸಾರಿಗೆ ನಿಗಮಕ್ಕೆ ಸೇರಿದ ಎಲ್ಲಾ ಬಸ್‌ಗಳಲ್ಲೂ ಈ ಸೌಲಭ್ಯ ಇರಲಿದ್ದು, ಮಾರ್ಚ್ 8ರಂದು ಸುಮಾರು 8.50 ಲಕ್ಷ ಮಹಿಳೆಯರು ಪ್ರಯಾಣಿಸುವ ನಿರೀಕ್ಷೆ ಇದೆ.ರಾಜ್ಯ ಸರ್ಕಾರದ ಅಧಿಕೃತ ಹೇಳಿಕೆ ಪ್ರಕಾರ, ಬೊಕ್ಕಸಕ್ಕೆ ಸುಮಾರು ₹7.50 ಕೋಟಿ ಹೊರೆಯಾಗಲಿದೆ.
ನಿಗಮದ ಸಾಮಾನ್ಯ ಬಸ್‌ಗಳಲ್ಲಿನ ಪ್ರಯಾಣ ದರದಲ್ಲಿ ಮಹಿಳೆಯರಿಗೆ ರಿಯಾಯಿತಿಯನ್ನು ಶೇಕಡ 50ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಅಶೋಕ ಗೆಹಲೋತ್ ಅನುಮೋದಿಸಿದ್ದಾರೆ.
ಪ್ರಸ್ತುತ
ಸಾಮಾನ್ಯ ಬಸ್‌ಗಳಲ್ಲಿ ಶೇ 30ರಷ್ಟು ರಿಯಾಯಿತಿ ಇದೆ. ಹೆಚ್ಚಿನ ವಿನಾಯಿತಿ ಏಪ್ರಿಲ್
1ರಿಂದ ಜಾರಿಗೆ ಬರಲಿದೆ. ಈ ಕ್ರಮದಿಂದ ರಾಜ್ಯ ಸರ್ಕಾರದ ಮೇಲೆ ಹೆಚ್ಚುವರಿಯಾಗಿ ವಾರ್ಷಿಕ
ಸುಮಾರು 3.50 ಕೋಟಿ ಆರ್ಥಿಕ ಹೊರೆ ಬೀಳಲಿದೆ.
ಗೆಹಲೋತ್ ಅವರು 2023-24ರ ರಾಜ್ಯ ಬಜೆಟ್‌ನಲ್ಲಿ ಹೆಚ್ಚಿನ ರಿಯಾಯಿತಿ ಘೋಷಿಸಿದ್ದರು.