HEALTH TIPS

ಜೀವನದಲ್ಲಿ ಯಾವುದು ‘ಸಂತೋಷ’ವನ್ನು ನೀಡುತ್ತದೆ? ಉತ್ತರ ಕಂಡುಕೊಂಡ 85 ವಷರ್Àಗಳ ಅಧ್ಯಯನ!


            ಸಂತೋಷ ಎಂಬುದು ಬಹುಷಃ ಮಾವ ಸಹಿತ ಪ್ರಪಂಚದ ಜೀವಜಾಲಗಳ ಆತ್ಯಂತಿಕ ಲಕ್ಷ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಾಚೀನ ಭಾರತೀಯ ಸನಾತನ ಸಂಸ್ಕøತಿ ಈ ಬಗ್ಗೆ ಸಾಕಷ್ಟು ಉತ್ತರಗಳನ್ನು ಕಂಡುಕೊಂಡಿದ್ದರೂ ಆಧುನಿಕ ವಿಜ್ಞಾನ ಈಗಷ್ಟೇ ಒಂದುಹಂತದ ಪ್ರಾಪ್ತಿಗೆ ತಲಪಿದಂತಿದೆ!. ಯಾವುದು ನಮ್ಮ ಜೀವನವನ್ನು ಸಂತೋಷದಿಂದ ತುಂಬುತ್ತದೆ? ಹೀಗೊಂದು ಪ್ರಶ್ನೆ ಕೇಳುವ ಮೂಲಕ ಹಾರ್ವರ್ಡ್ ವಿಶ್ವವಿದ್ಯಾಲಯ ಅಧ್ಯಯನ ಆರಂಭಿಸಿದೆ.
            ಈಗಲ್ಲ, 85 ವರ್ಷಗಳ ಹಿಂದೆ. ನಿಖರವಾಗಿ ಹೇಳಬೇಕೆಂದರೆ 1938 ರಲ್ಲಿ. ಎರಡು ವರ್ಷಗಳ ಅವಧಿಯಲ್ಲಿ, ಪ್ರಪಂಚದ ಎಲ್ಲಾ ಭಾಗಗಳಿಂದ ಆಯ್ಕೆಯಾದ ಹೆಚ್ಚಿನ ಸಂಖ್ಯೆಯ ಜನರಿಗೆ ಈ ಪ್ರಶ್ನೆಯನ್ನು ಕೇಳಲಾಯಿತು, ಅವರಿಗೆ ಜೀವನದಲ್ಲಿ ಸಂತೋಷವನ್ನು ಯಾವುದು ತುಂಬುತ್ತದೆ ಎನ್ನುವಲ್ಲಿಂದ.
         ಪ್ರಶ್ನೆಗೆ ಉತ್ತರವೆಂದರೆ ಹಣ, ಸ್ಥಾನಮಾನ, ಉನ್ನತ ಉದ್ಯೋಗ ಅಥವಾ ಆರೋಗ್ಯವಲ್ಲ. ಒಳ್ಳೆಯ ಸಂಬಂಧಗಳು ಒಬ್ಬ ವ್ಯಕ್ತಿಯು ದೀರ್ಘಕಾಲದವರೆಗೆ ಸಂತೋಷ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಸಹಾಯ ಮಾಡುವ ಅಂಶವಾಗಿದೆ. ಎಂಟು ದಶಕಗಳಿಗೂ ಹೆಚ್ಚು ಕಾಲ ನಡೆದ ಮತ್ತು ಇನ್ನೂ ನಡೆಯುತ್ತಿರುವ ಆ ಅಧ್ಯಯನದಲ್ಲಿ, ಸಂತೋಷದ ರಹಸ್ಯ ಧನಾತ್ಮಕ ಸಂಬಂಧಗಳು ಎಂಬುದು ಪ್ರತಿ ಬಾರಿ ಸ್ಪಷ್ಟವಾಯಿತು.
          ಸಂಶೋಧಕರು ಮತ್ತು ಲೇಖಕರಾದ ರಾಬರ್ಟ್ ವಾಲ್ಡಿಂಗರ್ ಮತ್ತು ಮಾರ್ಕ್ ಶುಲ್ಜ್ ಪ್ರಸ್ತುತ ಹಾರ್ವರ್ಡ್ ಸ್ಟಡಿ ಆಫ್ ಅಡಲ್ಟ್ ಡೆವಲಪ್‍ಮೆಂಟ್‍ನ ಈ ಜೀವನ ತೃಪ್ತಿ ಅಧ್ಯಯನಗಳನ್ನು ಮುನ್ನಡೆಸುತ್ತಿದ್ದಾರೆ. ಇದು ವಿಶ್ವದ ಅತಿ ದೀರ್ಘವಾದ ಅಧ್ಯಯನವಾಗಿದೆ.
             ಹಣದಿಂದ ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ. ಜೀವನದಲ್ಲಿ ಭದ್ರತೆ ಒದಗಿಸಲಿದೆ. ಆದರೆ ಜೀವನದಲ್ಲಿ ಶಾಶ್ವತವಾದ ಸಂತೋಷವನ್ನು ನಿರ್ಧರಿಸುವುದು ಇತರರೊಂದಿಗಿನ ನಮ್ಮ ಸಂಬಂಧಗಳ ತೀವ್ರತೆ ಮತ್ತು ಅದರ ಆಳ ಎಂಬುದು ಸಂಶೋಧಕರು ತೋರಿಸುತ್ತಾರೆ. ಉತ್ತಮ ಸಂಬಂಧವು ನೀಡುವ ಸಂತೋಷವನ್ನು ಯಾವುದೂ ನೀಡುವುದಿಲ್ಲ ಎಂಬ ಒಂದುಹಂತದ ತೀರ್ಮಾನ ಈಗಿನದು.



 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries