ತಿರುವನಂತಪುರಂ: ರಾಜ್ಯದಲ್ಲಿ ಅಳವಡಿಸಲಾಗಿರುವ ಸಾವಿರ ಇ-ಶೌಚಾಲಯಗಳ ಪೈಕಿ ಪ್ರಸ್ತುತ 110 ಮಾತ್ರ ಕಾರ್ಯನಿರ್ವಹಿಸುತ್ತಿವೆ.
ರಸ್ತೆಬದಿಗಳಲ್ಲಿ, ಮಾರುಕಟ್ಟೆಗಳಲ್ಲಿ ಮತ್ತು ಪೊಲೀಸ್ ಠಾಣೆಗಳಲ್ಲಿ
ಇ-ಶೌಚಾಲಯ ನಿರ್ಮಿಸಲು ನಾನಾ ಇಲಾಖೆಗಳು ನಾನಾ ಹಂತಗಳಲ್ಲಿ ಕೋಟ್ಯಂತರ ರೂ.ವ್ಯಯಿಸಿದ್ದು ಇಂದಿಗೆ ಇತಿಹಾಸವಾಗಿದೆ
ಹೆಚ್ಚಿನ ಇ-ಶೌಚಾಲಯಗಳು ಕೆಟ್ಟುಹೋಗಿವೆ ಮತ್ತು ಹಿರಿಯ ನಾಗರಿಕರಿಗೆ ಬಳಸುವ ಸ್ಥಿತಿಯಲ್ಲಿಲ್ಲ. ಪ್ರಸ್ತುತ ಶೌಚಾಲಯಗಳಲ್ಲಿ ಮದ್ಯದ ಬಾಟಲಿಗಳು ಮತ್ತು ಕಸದ ರಾಶಿ ಮೂಗುಮುಚ್ಚುವ ಗಬ್ಬು ವಾಸನೆಗಳಿಂದ ಅವ್ಯವಸ್ಥಿತವಾಗಿದೆ. ತಿರುವನಂತಪುರಂ ನಗರದಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಮೊನ್ನೆ ಅಟ್ಟುಕ್ಕಾಲ್ ಪೆÇಂಗಲ್ ಗೆ ಬಂದಿದ್ದ ಸಾವಿರಾರು ಮಹಿಳೆಯರು ಪರದಾಡಿದರು. ತನಿಖೆ ವೇಳೆ ರಾಜ್ಯದಲ್ಲಿ ಇ-ಶೌಚಾಲಯಗಳ ಸ್ಥಿತಿಗತಿ ಹೊರಬಿದ್ದಿದೆ.
2018 ರಲ್ಲಿ ರಾಜ್ಯ ಸರ್ಕಾರ ಮಹಿಳಾ ಸ್ನೇಹಿ ಶೌಚಾಲಯಗಳನ್ನು ಸ್ಥಾಪಿಸುವುದಾಗಿ ಘೋಷಿಸಿತ್ತು. ಆದರೆ ಐದು ವರ್ಷ ಕಳೆದರೂ ಇದು ಎಲ್ಲಿಯೂ ಜಾರಿಯಾಗಿಲ್ಲ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಮಹಿಳಾ ಸ್ನೇಹಿ ಶೌಚಾಲಯಗಳನ್ನು ಅಳವಡಿಸುವ ಮುಖ್ಯಮಂತ್ರಿಗಳ 2020 ಹೊಸ ವರ್ಷದ ಘೋಷಣೆಯೂ ಕಾಗದದಕ್ಕೆ ಮಾತ್ರ ಸೀಮಿತವಾಗಿದೆ.
ಕಾಸರಗೋಡು ಹೊಸ ಬಸ್ ನಿಲ್ದಾಣ ಬಳಿಯ ಇ-ಶೌಚಾಲಯ ಉದ್ಘಾ|ಟನೆಗೊಂಡು ಎರಡು ತಿಂಗಳೂ ಕಾರ್ಯಾಚರಿಸದಿರುವುದು ಕ್ಷಮತೆಗೆ ಮಾದರಿಯಾಗಿದ್ದು, ಇಂದು ಸಂಪೂರ್ಣ ಮುಚ್ಚಲ್ಪಟ್ಟಿದೆ.
ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಸಾವಿರಾರು ಇ-ಶೌಚಾಲಯಗಳು ಉಪಯೋಗ್ಯ ಶೂನ್ಯ: 890 ಶೌಚಾಲಯ ಬಳಕೆಗೆ ಅಯೋಗ್ಯ
0
ಮಾರ್ಚ್ 12, 2023
Tags