HEALTH TIPS

ಏರುತ್ತಿರುವ ತಾಪಮಾನ: ಕೆಲಸದ ಕಾಲಾವಧಿಯಲ್ಲಿ ಬದಲಾವಣೆ

 



               ಕಾಸರಗೋಡು: ಜಿಲ್ಲೆಯಲ್ಲಿ ಬಿಸಿಲ ತಾಪ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಿಸಿಲಿಗೆ ಮೈಯೊಡ್ಡಿ ಕೆಲಸ ಮಾಡುವ ಕಾರ್ಮಿಕರ ಕೆಲಸದ ಸಮಯವನ್ನು ಕ್ರಮೀಕರಿಸಿ ಜಿಲ್ಲಾ ಕಾರ್ಮಿಕ ಅಧಿಕಾರಿ(ಜಾರಿ)ಆದೇಶ ಹೊರಡಿಸಿದ್ದಾರೆ. ಹಗಲು ಪಾಳಿಯಲ್ಲಿ ಕೆಲಸ ಮಾಡುವವರಿಗೆ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಹೊಂದಿಸಲಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ (ಎನ್‍ಎಫ್‍ಒ) ಮಾಹಿತಿ ನೀಡಿದರು.ಅವರ ಕೆಲಸದ ಅವಧಿಯು ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ವಿಶ್ರಾಂತಿ ಅವಧಿಯಾಗಿರಲಿದೆ. ಈ ಕಾರ್ಮಿಕರ ಕೆಲಸವನ್ನು ಬೆಳಗ್ಗೆ 7ರಿಂದ ಸಂಜೆ 7ರ ವರೆಗಿನ ಕಾಲಾವಧಿಯಲ್ಲಿ ಎಂಟು ತಾಸುಗಳ ಕೆಲಸ ನಿರ್ವಹಿಸುವ ರೀತಿಯಲ್ಲಿ ಕ್ರಮೀಕರಿಸಿಕೊಳ್ಳುವಂತೆ ಸೂಚಿಸಲಾಗಿದೆ.
                 ಬೆಳಗ್ಗಿನ ಅವಧಿಯು ಮಧ್ಯಾಹ್ನ 12 ಗಂಟೆಗೆ ಕೊನೆಗೊಂಡು ಮಧ್ಯಾಹ್ನ 3 ಗಂಟೆಗೆ ಮಧ್ಯಹ್ನದ ಪಾಳಿ ಪ್ರಾರಂಭವಾಗಲಿದೆ. ಬದಲಾದ ಈ ಕಾಲಾವಧಿ ಏ. 30ರ ವರೆಗೆ ಜಾರಿಯಲ್ಲಿರುವುದಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ಮಾಹಿತಿ ನೀಡಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries