ಕಾಸರಗೋಡು: ಆರೋಗ್ಯ ಮತ್ತು ಸುರಕ್ಷತೆಗಾಗಿ ಕಸಮುಕ್ತ ಕೇರಳ; ಆರೋಗ್ಯ ಜಾಗರೂಕತೆ - ಸಾಂಕ್ರಾಮಿಕ ರೋಗ ತಡೆ ಅಭಿಯಾನದ ಅಂಗವಾಗಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಸಂಸ್ಥೆಗಳ ಮುಖ್ಯಸ್ಥರು, ವ್ಯಾಪಾರಿ ಸಂಘದ ಪ್ರತಿನಿಧಿಗಳು, ನಗರಸಭಾ ಪ್ರತಿನಿಧಿಗಳು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಕಾರ್ಯಾಗಾರವನ್ನು ನಡೆಸಲಾಯಿತು.
ಕಾರ್ಯಾಗಾರವನ್ನು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಉದ್ಘಾಟಿಸಿದರು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ವಿ.ಸರಸ್ವತಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಿಲ್ ಟೆಕ್ ಅಬ್ದುಲ್ಲಾ, ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಲತಾ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ವಿ.ಮಾಯಾಕುಮಾರಿ, ಸ್ಥಳೀಯಾಡಳಿತ ಜಂಟಿ ನಿರ್ದೇಶಕ ಜೇಸನ್ ಜೋಸೆಫ್, ನೈರ್ಮಲ್ಯ ಮಿಷನ್ ಸಂಯೋಜಕ ಕೆ.ವಿ.ರಂಜಿತ್, ಕೈಗಾರಿಕಾ ಅಭಿವೃದ್ಧಿ ಅಧಿಕಾರಿ ಅಶೋಕ್ ಕುಮಾರ್, ಆರೋಗ್ಯ ಮೇಲ್ವಿಚಾರಕ ಧರ್ಮಜನ್, ಜೆಪಿಎಚ್ ಎನ್. ದಾಕ್ಷಾಯಣಿ, ನಗರಸಭೆ ಕಾರ್ಯದರ್ಶಿ ಪಿ.ಶ್ರೀಜಿತ್ ಮಾತನಾಡಿದರು.
ಕಸಮುಕ್ತ ಕೇರಳ: ಕಾರ್ಯಾಗಾರ
0
ಮಾರ್ಚ್ 28, 2023