ಕಾಸರಗೋಡು: ಕ್ರೀಡೆಯ ವಿಶಿಷ್ಟ ಪ್ರತಿಭೆ ಪಿ.ಟಿ. ಉಷಾ ಅವರಿಗೆ ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ.
ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಹಾಗೂ ರಾಜ್ಯಸಭಾ ಸದಸ್ಯೆ ಉಷಾ ಅವರು ಕ್ರೀಡಾ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ. ಇದು ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯವು ನೀಡುವ ಮೊದಲ ಗೌರವ ಡಾಕ್ಟರೇಟ್ ಆಗಿದೆ.
ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ 19 ಚಿನ್ನ ಸೇರಿದಂತೆ 33 ಪದಕಗಳು, ಸತತ ನಾಲ್ಕು ಏಷ್ಯನ್ ಗೇಮ್ಸ್‍ಗಳಲ್ಲಿ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್, ಪಿಟಿ ಉಷಾ 1985 ರ ಜಕಾರ್ತದಲ್ಲಿ ಐದು ಚಿನ್ನ ಸೇರಿದಂತೆ ಆರು ಪದಕಗಳು ಸೇರಿದಂತೆ ದೇಶಕ್ಕೆ ಹೆಮ್ಮೆ ತಂದ ಅನೇಕ ಕ್ಷಣಗಳನ್ನು ನೀಡಿದ ತಾರೆ. ಅವರು ಕಿನಾಲೂರಿನ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್‍ನ ಮುಖ್ಯಸ್ಥರೂ ಆಗಿದ್ದಾರೆ. 20 ವರ್ಷಗಳ ಸುಧೀರ್ಘ ಇತಿಹಾಸದ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ ನ ಆಟಗಾರ್ತಿಯರು ಇದುವರೆಗೆ 79 ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ. ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಆರುನೂರಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ.
ದೇಶದಲ್ಲಿ ಕ್ರೀಡಾ ಸಂಸ್ಕøತಿಯ ಬುನಾದಿ ಹಾಕಿದ ಮೇಧಾವಿ ಪಿ.ಟಿ. ಉಷಾ ಎಂದು ಉಪಕುಲಪತಿ ಪೆÇ್ರ.ಎಚ್. ವೆಂಕಟೇಶ್ವರಲು ಹೇಳಿದರು. ರಾಷ್ಟ್ರಕ್ಕೆ ಮಾದರಿಯಾದವರನ್ನು ಗೌರವಿಸುವುದು ವಿಶ್ವವಿದ್ಯಾಲಯದ ಕರ್ತವ್ಯ. ಪಿಟಿ ಉಷಾ ವಿದ್ಯಾರ್ಥಿಗಳಿಗೆ ಸದಾ ಪ್ರೇರಣೆ ನೀಡುವ ಸಾಧಕಿ. ಉಷಾ ಅವರ ಜೀವನವೂ ಸಾಧನೆಯಾಗಿದೆ ಎಂದು ತಿಳಿಸಿದರು. ವಿಶ್ವವಿದ್ಯಾಲಯ ಆಯೋಜಿಸುವ ವಿಶೇಷ ಸಮಾರಂಭದಲ್ಲಿ ಡಾಕ್ಟರೇಟ್ ಪ್ರದಾನ ಮಾಡಲಾಗುವುದು.
ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದ ಮೊದಲ ಗೌರವ ಡಾಕ್ಟರೇಟ್ ಪಿ.ಟಿ. ಉಷಾಗೆ: ಕ್ರೀಡಾ ಕ್ಷೇತ್ರದಲ್ಲಿನ ಕೊಡುಗೆಗಳನ್ನು ಪರಿಗಣಿಸಿ ಘೋಷಣೆ
0
ಮಾರ್ಚ್ 23, 2023