ತಿರುವನಂತಪುರಂ: ವಿದ್ಯಾರ್ಥಿಗಳಲ್ಲಿ ಅನಗತ್ಯ ಸ್ಪರ್ಧೆ ಮತ್ತು ಒತ್ತಡವನ್ನು ಉಂಟುಮಾಡುವ ಮಕ್ಕಳ ಪೋಟೋಗಳನ್ನು ಪ್ರದರ್ಶಿಸುವ ಜಾಹೀರಾತು ಫಲಕಗಳು ಮತ್ತು ಜಾಹೀರಾತುಗಳನ್ನು ತಪ್ಪಿಸುವಂತೆ ಮಕ್ಕಳ ಹಕ್ಕುಗಳ ಆಯೋಗವು ಶಾಲೆಗಳಿಗೆ ಸೂಚಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ನಿರ್ದೇಶಕರು ಮತ್ತು ಪರೀಕ್ಷಾ ಕಾರ್ಯದರ್ಶಿಗಳಿಗೆ ಅಗತ್ಯ ಆದೇಶ ಹೊರಡಿಸುವಂತೆ ಆಯೋಗ ಸೂಚಿಸಿದೆ. ಆಯೋಗದ ಅಧ್ಯಕ್ಷ ಕೆ.ವಿ.ಮನೋಜ್ ಕುಮಾರ್ ಹಾಗೂ ಸದಸ್ಯರಾದ ಸಿ.ವಿಜಯಕುಮಾರ್ ಮತ್ತು ಪಿ.ಪಿ.ಶ್ಯಾಮಲಾದೇವಿ ಅವರಿದ್ದ ಪೂರ್ಣ ಪೀಠ ಈ ಆದೇಶ ಹೊರಡಿಸಿದೆ.
ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, 2012 ರ ನಿಯಮ 45 ರ ಅಡಿಯಲ್ಲಿ ಆದೇಶದ ಮೇಲೆ ಕೈಗೊಂಡ ಕ್ರಮಗಳ ವರದಿಯನ್ನು ಒಂದು ತಿಂಗಳೊಳಗೆ ಲಭ್ಯವಾಗುವಂತೆ ಆಯೋಗವು ಸೂಚಿಸಿದೆ. ಮಕ್ಕಳ ನಡುವೆ ಅನಗತ್ಯ ಪೈಪೆÇೀಟಿ, ಒತ್ತಡ, ತಾರತಮ್ಯ ಮೂಡಿಸುವ ರೀತಿಯಲ್ಲಿ ನಡೆಸುವ ಪರೀಕ್ಷೆಗಳಲ್ಲೂ ಬದಲಾವಣೆ ತರುವಂತೆ ಆಯೋಗ ಸೂಚಿಸಿದೆ.
ಮಕ್ಕಳ ಹಕ್ಕುಗಳ ಆಯೋಗ ಹೊರಡಿಸಿದ ಆದೇಶದ ಪ್ರಕಾರ, ಎಲ್‍ಎಸ್‍ಎಸ್ ಮತ್ತು ಯುಎಸ್‍ಎಸ್ ಪರೀಕ್ಷೆಗಳನ್ನು ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಸಬೇಕು ಮತ್ತು ಮಕ್ಕಳಿಗೆ ಮಧ್ಯಾಹ್ನದ ಊಟ ಮತ್ತು ಬಿಸಿ ನೀರನ್ನು ಒದಗಿಸಬೇಕು, ಶಾಖದಿಂದ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದಿದೆ.
ಶಾಲೆಗಳು ಎಲ್ ಎಸ್ ಎಸ್ ಮತ್ತು ಯುಎಸ್ ಎಸ್ ಪರೀಕ್ಷೆಗಳಿಗೆ ವಿಶೇಷ ತರಗತಿಗಳನ್ನು ಆಯೋಜಿಸುವುದನ್ನು ನಿಷೇಧಿಸಬೇಕು, ಮಕ್ಕಳ ಬೇಸಿಗೆ ರಜೆಯನ್ನು ಕಸಿದುಕೊಳ್ಳಬಾರದು ಎಂದು ಹೇಳಲಾಗಿದೆ. ಖಾಸಗಿ ಟ್ಯೂಷನ್ ಸೆಂಟರ್‍ಗಳಲ್ಲಿ ಪರೀಕ್ಷೆಗೆ ವಿಶೇಷ ಕೋಚಿಂಗ್ ನೀಡುವುದನ್ನು ನಿಲ್ಲಿಸಬೇಕು, ಶಾಲೆಗಳಲ್ಲಿ ಮಕ್ಕಳನ್ನು ಪ್ರತ್ಯೇಕಿಸುವುದನ್ನು ತಡೆಯಲು ಮತ್ತು ರಜಾದಿನಗಳು ಸೇರಿದಂತೆ ವಿಶೇಷ ತರಬೇತಿಯನ್ನು ನೀಡುವ ಪ್ರವೃತ್ತಿಗಳೇ ಮೊದಲಾದ ವಿದ್ಯಮಾನಗಳಿಗೆ ಕೊನೆಹಾಡಲು ಸಲಹೆಗಳನ್ನು ಮುಂದಿಟ್ಟಿದೆ.
‘ಅನಗತ್ಯ ಸ್ಪರ್ಧೆ ಸೃಷ್ಟಿಸುವ’ ಶಾಲಾ ಜಾಹೀರಾತು ಫಲಕಗಳಿಂದ ಮಕ್ಕಳನ್ನು ಹೊರಗಿಡಬೇಕು: ಮಕ್ಕಳ ಹಕ್ಕುಗಳ ಆಯೋಗ
0
ಮಾರ್ಚ್ 26, 2023