ಕೊಚ್ಚಿ: ಬ್ರಹ್ಮಪುರಂ ತ್ಯಾಜ್ಯ ಸಂಗ್ರಹ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊಚ್ಚಿಯ ವಿವಿಧ ಪ್ರದೇಶಗಳಲ್ಲಿ ಇಂದು ಮತ್ತು ನಾಳೆಯೂ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.
ವೃತ್ತಿಪರ ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿದೆ. ಆರೋಗ್ಯ ಮುಂಜಾಗ್ರತಾ ಕ್ರಮವಾಗಿ ಇಂದು ಮತ್ತು ನಾಳೆ ರಜೆ ಘೋಷಿಸಲಾಗಿದೆ. ಏತನ್ಮಧ್ಯೆ, ಕೊಚ್ಚಿಯಲ್ಲಿ ಹಾನಿಕಾರಕ ಹೊಗೆ ಉಪದ್ರವವು ಎಂಟನೇ ದಿನವೂ ಯಾವುದೇ ಬದಲಾವಣೆಯಿಲ್ಲದೆ ಮುಂದುವರೆದಿದೆ.
ಇಂದು ಆರಂಭವಾಗಿರುವ ಎಸ್ ಎಸ್ ಎಲ್ ಸಿ, ಪ್ಲಸ್ ಟು ಸೇರಿದಂತೆ ತರಗತಿಗಳ ಪಬ್ಲಿಕ್ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇದ್ದಿರಲಿಲ್ಲ. ಬೆಂಕಿ ಅವಘಡದಿಂದ ಈ ಭಾಗದ ಜನರು ಅನೇಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ವಡವುಕೋಡ್ ಪುತ್ತಂಕುರಿಶ್ ಗ್ರಾಮ ಪಂಚಾಯತ್, ಪೂರ್ವಕಶಂಬಳಂ ಗ್ರಾಮ ಪಂಚಾಯತ್, ಕುನ್ನತ್ತುನಾಡು ಗ್ರಾಮ ಪಂಚಾಯತ್, ತೃಕ್ಕಾಕರ ನಗರಸಭೆ, ತ್ರಿಪುಣಿತುರಾ ನಗರಸಭೆ, ಮರಡು ನಗರಸಭೆ ಮತ್ತು ಕೊಚ್ಚಿ ನಗರಸಭೆಯ ಸ್ಥಳೀಯ ಸಂಸ್ಥೆಗಳಲ್ಲಿರುವ ವೃತ್ತಿಪರ ಕಾಲೇಜು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ನಾಳೆಯೂ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ. ಅಂಗನವಾಡಿಗಳು, ಶಿಶುವಿಹಾರ ಮತ್ತು ಡೇ ಕೇರ್ ಸೆಂಟರ್‍ಗಳು, ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಿಗೂ ರಜೆ ಅನ್ವಯಿಸುತ್ತದೆ. ಎಸ್‍ಎಸ್‍ಎಲ್‍ಸಿ ಮತ್ತು ಹೈಯರ್ ಸೆಕೆಂಡರಿ ಪರೀಕ್ಷೆ ಸೇರಿದಂತೆ ಸಾರ್ವಜನಿಕ ಪರೀಕ್ಷೆಗಳಲ್ಲಿ ಸಡಿಲಿಕೆ ಇರುವುದಿಲ್ಲ ಎಮದು ತಿಳಿಸಲಾಗಿದೆ.
ಎಂಟನೇ ದಿನವೂ ಮುಂದುವರಿದ ಧೂಮ್ರಾವರಣ: ಹೊಗೆಯಲ್ಲಿ ಕೊಚ್ಚಿದ ಕೊಚ್ಚಿ: ಶಿಕ್ಷಣ ಸಂಸ್ಥೆಗಳಿಗೆ ನಾಳೆಯೂ ರಜೆ
0
ಮಾರ್ಚ್ 09, 2023