ಮಧೂರು: ಕೋಟೆಕಣಿ ಶ್ರೀ ಮಲ್ಲಿಕಾರ್ಜುನ ಬಾಲಗೋಕುಲದ 7 ನೇ ವಾರ್ಷಿಕೋತ್ಸವದ ಪ್ರಯುಕ್ತ ಕಾಸರಗೋಡು ನಗರ, ಮಧೂರು ಮಂಡಲ ಹಾಗು ಮೊಗ್ರಾಲ್‍ಪುತ್ತೂರು ಮಂಡಲದ ಬಾಲಗೋಕುಲದ ಮಕ್ಕಳಿಗಾಗಿ ಕೌಸ್ತುಭ ಪ್ರಶಸ್ತಿ, ರಸ ಪ್ರಶ್ನೆ ಸ್ಪರ್ಧಾ ಕಾರ್ಯಕ್ರಮ ಕಾಸರಗೋಡು ಮುನ್ಸಿಪಲ್ ಕಾನರೆನ್ಸ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಡಾ.ವೀಣಾ ಮಂಜುನಾಥ್ ದೀಪ ಬೆಳಗಿಸಿ ಉದ್ಘಾಟಿಸಿದರು. ಉದ್ಯಮಿ ಗಣೇಶ್ ಮಾವಿನಕಟ್ಟೆ, ಬಾಲಗೋಕುಲ ತಾಲೂಕು ಸಮಿತಿ ಸಂಪರ್ಕ ಪ್ರಮುಖ್ ಶಂಕರನಾರಾಯಣ ಭಟ್, ಕಾಸರಗೋಡು ನಗರಸಭಾ ಸದಸ್ಯ ವರಪ್ರಸಾದ್ ಕೋಟೆಕಣಿ, ಶ್ರೀ ಮಲ್ಲಿಕಾರ್ಜುನ ಬಾಲಗೋಕುಲದ ಅಧ್ಯಕ್ಷ ಭರತೇಶ್ ಉಪಸ್ಥಿತರಿದ್ದರು. ಶ್ರೀ ಮಲ್ಲಿಕಾರ್ಜುನ ಬಾಲಗೋಕುಲದ ಕಾರ್ಯದರ್ಶಿ ಅಪರ್ಣ ಗಣೇಶ್ ಸ್ವಾಗತಿಸಿದರು. ಧನೇಶ್ ಕೋಟೆಕಣಿ ವಂದಿಸಿದರು. ಬಾಲಗೋಕುಲ ತಾಲೂಕು ಸಮಿತಿಯ ಶಿಕ್ಷಣ ಪ್ರಮುಖ್ ದೇವದಾಸ್ ನುಳ್ಳಿಪ್ಪಾಡಿ ರಸ ಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಸಮಾರೋಪ ಸಭೆಯಲ್ಲಿ ಬಾಲಗೋಕುಲ ತಾಲೂಕು ಸಮಿತಿ ವ್ಯವಸ್ಥಾ ಪ್ರಮುಖ್ ಜಯರಾಮ ಶೆಟ್ಟಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು. ನಗರಸಭಾ ಸದಸ್ಯ ವರಪ್ರಸಾದ್ ಕೋಟೆಕಣಿ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಹಿರಿಯರಾದ ಜಯಂತಿ ಮನೋಹರ್, ಬಾಲಗೋಕುಲ ಮಧೂರು ಮಂಡಲದ ಸಹ ಪ್ರಮುಖ್ ನವೀನ್, ಮೊಗ್ರಾಲ್ ಪುತ್ತೂರು ಮಂಡಲದ ಪ್ರವಾಸಿ ಕಾರ್ಯಕರ್ತ ಶಶಾಂಕ್ ಪಂಡಿತ್, ಶ್ರೀ ಮಲ್ಲಿಕಾರ್ಜುನ ಬಾಲಗೋಕುಲದ ಅಧ್ಯಕ್ಷ ಭರತೇಶ್ ಉಪಸ್ಥಿತರಿದ್ದರು. ಕಾಸರಗೋಡು ನಗರ ವಿಭಾಗದಲ್ಲಿ ಶ್ರೀ ಮಲ್ಲಿಕಾರ್ಜುನ ಬಾಲಗೋಕುಲ ಕೋಟೆಕಣಿ ಪ್ರಥಮ, ಶಾರದಾ ಬಾಲಗೋಕುಲ ಅಣಂಗೂರು ದ್ವಿತೀಯ ಬಹುಮಾನ ಪಡೆಯಿತು. ಮೊಗ್ರಾಲ್‍ಪುತ್ತೂರು ಮಂಡಲದ ವಿಭಾಗದಲ್ಲಿ ಸೂರ್ಯ ಬಾಲಗೋಕುಲ ಪೂಕರೆ ಪ್ರಥಮ, ಸನಾತನ ಬಾಲಗೋಕುಲ ಬೆದ್ರಡ್ಕ ದ್ವಿತೀಯ ಬಹುಮಾನ ಪಡೆಯಿತು. ಮಧೂರು ಮಂಡಲ ವಿಭಾಗದಲ್ಲಿ ಶ್ರೀ ದುರ್ಗಾಪರಮೇಶ್ವರೀ ಬಾಲಗೋಕುಲ ಮನ್ನಿಪ್ಪಾಡಿ ಪ್ರಥಮ ಹಾಗು ದ್ವಿತೀಯ ಬಹುಮಾನ ಪಡೆಯಿತು. ಕೊನೆಯ ಹಂತದ ಸ್ಪರ್ಧೆಯಲ್ಲಿ ಕೌಸ್ತುಭ ಪ್ರಶಸ್ತಿಯನ್ನು ಸೂರ್ಯ ಬಾಲಗೋಕುಲ ಪೂಕರೆ ಪಡೆಯಿತು.
ಕೌಸ್ತುಭ ಪ್ರಶಸ್ತಿ ರಸ ಪ್ರಶ್ನೆ ಸ್ಪರ್ಧಾ ಕಾರ್ಯಕ್ರಮ
0
ಮಾರ್ಚ್ 10, 2023