ನವದೆಹಲಿ :ಮಾರ್ಚ್ 21ರಂದು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಉತ್ತರಿಸಬೇಕಿರುವ ಅಂತಿಮ ಪ್ರಶ್ನೆಗಳ ಪಟ್ಟಿಯಿಂದ ಲಡಾಖ್‌ನಲ್ಲಿ ʻಪೆಟ್ರೋಲಿಂಗ್ ಪಾಯಿಂಟ್‌ಗಳನ್ನುʼ ಕಳೆದುಕೊಂಡಿರುವ ಕುರಿತಾದ ಪ್ರಶ್ನೆಗಳನ್ನು ಕೇಂದ್ರ ಸರ್ಕಾರ ಹೊರತುಪಡಿಸಿದೆ.
ಗೃಹ ಸಚಿವಾಲಯಕ್ಕೆ ಸಲ್ಲಿಸಲಾದ ಪ್ರಶ್ನೆಗಳ ಪಟ್ಟಿಯನ್ನು 35 ರಿಂದ 24 ಕ್ಕೆ ಇಳಿಸಲಾಗಿದೆ ಎಂದು ಮೂಲಗಳು ಹೇಳಿವೆ. ಈ ಕುರಿತು ಗೃಹ ಸಚಿವಾಲಯ ಪ್ರತಿಕ್ರಿಯಿಸಿಲ್ಲ.
ಭಾರತ-ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳುವುದರಿಂದ ಸಂಸದರನ್ನು ಸತತವಾಗಿ ತಡೆಯುವ ಸರ್ಕಾರದ ಯತ್ನಗಳ ನಡುವೆ ಈ ಬೆಳವಣಿಗೆ ನಡೆದಿದೆ. ಪೂರ್ವ ಲಡಾಖ್‌ನಲ್ಲಿ 65 ಪೆಟ್ರೋಲಿಂಗ್ ಪಾಯಿಂಟ್‌ಗಳ ಪೈಕಿ 26 ಪಾಯಿಂಟ್‌ಗಳಿಗೆ ಭಾರತ ಪ್ರವೇಶ ಕಳೆದುಕೊಂಡಿರುವ ಕುರಿತಂತೆ ವಿಪಕ್ಷಗಳು ಸರ್ಕಾರದಿಂದ ಉತ್ತರಗಳನ್ನು ಕೇಳುತ್ತಿವೆ.
ಲಡಾಖ್‌ನಲ್ಲಿನ ನಿರ್ದಿಷ್ಟ ಪೆಟ್ರೋಲಿಂಗ್ ಪಾಯಿಂಟ್‌ಗಳಿಗೆ ಭಾರತ ಪ್ರವೇಶ ಕಳೆದುಕೊಂಡಿರುವುದು ಲೇಹ್-ಲಡಾಖ್‌ನ ಎಸ್ಪಿ ಒಬ್ಬರು ಬರೆದ ಸಂಶೋಧನಾ ಲೇಖನದ ಭಾಗವಾಗಿತ್ತು. ಜನವರಿಯಲ್ಲಿ ಪೊಲೀಸ್ ಮುಖ್ಯಸ್ಥರ ವಾರ್ಷಿಕ ಸಮ್ಮೇಳನದಲ್ಲಿ ಈ ಸಂಶೋಧನಾ ಲೇಖನವನ್ನು ಮಂಡಿಸಲಾಗಿತ್ತು. ಆದರೆ ಈ ಕುರಿತು ವ್ಯಾಪಕ ಚರ್ಚೆಗಳು ನಡೆದ ನಂತರ ಸಮ್ಮೇಳನದಲ್ಲಿ ಮಂಡಿಸಲಾದ ಎಲ್ಲಾ ವಿಷಯಗಳ ಕುರಿತ ಲೇಖನಗಳನ್ನು ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿತ್ತು.
ಕಾಂಗ್ರೆಸ್ ಸಂಸದರಾದ ಮನೀಶ್ ತಿವಾರಿ ಕುರಿತು 2020 ರಿಂದ 57 ಪ್ರಶ್ನೆಗಳನ್ನು ಕೇಳಿದ್ದರು. ಇತ್ತೀಚಿನ ಪ್ರಶ್ನೆ ಈ ವಿಚಾರ ಕುರಿತ ಅವರ 57ನೇ ಪ್ರಶ್ನೆಯಾಗಿತ್ತು. ಈ ಕುರಿತು ತಿವಾರಿ ಟ್ವೀಟ್ ಕೂಡ ಮಾಡಿದ್ದಾರೆ.