ಮಂಜೇಶ್ವರ: ಮೀಯಪದವು ಎಸ್.ವಿ.ವಿ.ಎಚ್.ಎಸ್. ಎಸ್ ಶಾಲೆಯಲ್ಲಿ ಸುಧೀರ್ಘ ಕಾಲ ಸೇವೆ ಸಲ್ಲಿಸಿ ಈ ವರ್ಷ ನಿವೃತ್ತರಾಗುತ್ತಿರುವ ಲಲಿತಾ ಬಿ ಇವರಿಗೆ ಶಾಲಾ ನಾರಾಯಣೀಯಂ ಸಭಾಭವನದಲ್ಲಿ ಬೀಳ್ಕೊಡುಗೆ ಸಮಾರಂಭ ಜರಗಿತು.
ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಧ್ಯಾಪಕಿ ಶಾಲೆಗೆ ನೀಡಿದ ಸೇವೆ ಮತ್ತು ತನ್ನ ವೃತ್ತಿಗೆ ನೀಡುತ್ತಿದ್ದ ಗೌರವಗಳ ಕುರಿತಾಗಿ ಮಾತನಾಡಿದರು. ಶಾಲೆಯ ಹಳೆ ವಿದ್ಯಾರ್ಥಿಯೂ ಕವಯತ್ರಿಯೂ ಆದ ಪ್ರಮೀಳಾ ಚುಳ್ಳಿಕ್ಕಾನ ಮಾತನಾಡಿ ತನ್ನ ವಿದ್ಯಾರ್ಥಿ ಜೀವನದಲ್ಲಿ ಸಾಹಿತ್ಯದೆಡೆಗೆ ಒಲವು ಮೂಡಿಸುವಲ್ಲಿ ಕನ್ನಡ ಅಧ್ಯಾಪಕಿಯ ಸೇವೆಯನ್ನು ಸ್ಮರಿಸಿದರು. ನಿವೃತ್ತರಾಗುತ್ತಿರುವ ಶಿಕ್ಷಕಿ ಮಾತನಾಡಿ ಶಾಲೆಯ ಜೀವನದ ಪ್ರಾರಂಭದ ದಿನಗಳು ಹಾಗು ವಿದ್ಯಾರ್ಥಿಗಳೊಂದಿಗಿನ ಒಡನಾಟವನ್ನು ನೆನೆದು ಭಾವುಕರಾದರು. ಶಾಲೆಯ ಅಭಿವೃದ್ಧಿಯಲ್ಲಿ ಅಧ್ಯಾಪಕರು ತಮ್ಮನ್ನು ತಾವು ಸಂಪೂರ್ಣ ತೊಡಗಿಸಿ ಕೊಂಡಾಗ ಮಾತ್ರ ಒಬ್ಬ ಶಿಕ್ಷಕ ಮತ್ತು ಶಾಲೆಯು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜನಾರ್ಧನ, ಮಾತೃ ಮಂಡಳಿಯ ಅಧ್ಯಕ್ಷೆ ಶೋಭಾ ಹಾಗು ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ರಮೇಶ್ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಶಿವಶಂಕರ್ ಭಟ್ ಸ್ವಾಗತಿಸಿ, ಲಕ್ಷ್ಮೀಶ ಬೊಳುಂಬು ವಂದಿಸಿದರು. ಮೃದುಲಾ ಕೆ.ಎಮ್ ಕಾರ್ಯಕ್ರಮ ನಿರ್ವಹಿಸಿದರು.
ಬೀಳ್ಕೊಡುಗೆ ಸಮಾರಂಭ
0
ಮಾರ್ಚ್ 13, 2023
Tags