ಮುಳ್ಳೇರಿಯ: ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಮಾ.7ರಿಂದ ಮಾ.11ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಮಹೋತ್ಸವದ ಅಂಗವಾಗಿ ಮಾ.6ರಂದು ಪ್ರಾತಃಕಾಲ ಉಧ್ವಾರ್ಚನೆಯಾಗಿ ಮಹಾನೈವೇದ್ಯ ಸಮರ್ಪಣೆ, ಮಹಾಪೂಜೆ, ಪ್ರಸಾದ ಸ್ವೀಕಾರ, ರಾತ್ರಿ ಸಭಿಕರ ಕೂಡುವಿಕೆ,ಮಹಾ ಪೂಜೆ, ಪ್ರಸಾದ ಸ್ವೀಕಾರ, ಪ್ರಾರ್ಥನೆ, ಅತ್ತಲ, ಮಾ.7ರಂದು ಬಲಿವಾಡು ಕೂಟ, 9.30ರಿಂದ 10.30ರ ಮಧ್ಯೆ ಧ್ವಜಾರೋಹಣವಾಗಿ ಮಹಾಪೂಜೆ, ಪ್ರಸಾದ ಸ್ವೀಕಾರ, ಅನ್ನ ಸಂತರ್ಪಣೆ, ರಾತ್ರಿ 7ರಿಂದ ಶ್ರೀ ದೇವರ ಶೃಂಗಾರ ಬಲಿ ಉತ್ಸವ, ಮಾ.8ರಂದು ಬೆಳಗ್ಗೆ 7ರಿಂದ ಶ್ರೀ ದೇವರ ಬಲಿ ಉತ್ಸವ, ಭಜಕರ ತುಲಾಭಾರ ಸೇವೆ, ಮಹಾಪೂಜೆ, ಪ್ರಸಾದ ಸ್ವೀಕಾರ, ಅನ್ನ ಸಂತರ್ಪಣೆ, ರಾತ್ರಿ 7ರಿಂದ ಶ್ರೀ ದೇವರ ಶೃಂಗಾರ ಬಲಿ ಉತ್ಸವ, ಮಾ.9ರಂದು ಬೆಳಗ್ಗೆ 7ರಿಂದ ಶ್ರೀ ದೇವರ ಬಲಿ ಉತ್ಸವ, ಭಜಕರ ತುಲಾಭಾರ ಸೇವೆ, ಮಹಾಪೂಜೆ, ಪ್ರಸಾದ ಸ್ವೀಕಾರ, ಅನ್ನ ಸಂತರ್ಪಣೆ, ರಾತ್ರಿ 7ರಿಂದ ಶ್ರೀ ದೇವರ ನಡುದೀಪೆÇೀತ್ಸವ, ಸಪ್ತಸ್ವರ ಮ್ಯೂಸಿಕ್ ಮಂಗಳೂರು- ನಾಗೇಶ್ ಕಿನ್ನಿಂಗಾರು ಮತ್ತು ಬಳಗದ ಭಕ್ತಿ ರಸಮಂಜರಿ, ಮಾ.10ರಂದು ಬೆಳಗ್ಗೆ 7ಕ್ಕೆ ಶ್ರೀ ದೇವರ ಉತ್ಸವ ಬಲಿ, ಭಜಕರ ತುಲಾಭಾರ ಸೇವೆ, ಮಹಾಪೂಜೆ, ಪ್ರಸಾದ ಸ್ವೀಕಾರ, ಅನ್ನಸಂತರ್ಪಣೆ, ರಾತ್ರಿ 7ರಿಂದ ಮರದಮೂಲೆ ಶ್ರೀ ಹರಿನಾಮಾಮೃತ ಭಜನಾ ಮಂಡಳಿ ಮಕ್ಕಳ ಸಂಘದ ಭಜನಾ ಸಂಕೀರ್ತನೆ, ಶೃಂಗಾರ ಉತ್ಸವ ಬಲಿಯಾಗಿ ಶ್ರೀ ದೇವರಿಗೆ ಶಯನ, ಮಾ.11ರಂದು ಬೆಳಗ್ಗೆ 8.30ಕ್ಕೆ ಸಭಿಕರ ಕೂಡುವಿಕೆಯಿಂದ ಪ್ರಾರ್ಥನೆ, ಕವಾಟೋದ್ಘಾಟನೆ (ಶಯನೋದ್ಘಾಟನೆ), ಮಹಾಪೂಜೆ, ತೀರ್ಥ ಪ್ರಸಾದ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ 7ಕ್ಕೆಅಟ್ಟೆ ಅಲಂಕಾರದೊಂದಿಗೆ ಶ್ರೀ ದೇವರ ಶೃಂಗಾರ ಉತ್ಸವ ಬಲಿ, ಶ್ರೀಗಂಧ ಪ್ರಸಾದ, 7.30ರಿಂದ ಪ್ರಸಿದ್ಧ ಗಾಯಕ ರತೀಶ್ ಕಂಡಡುಕ ಹಾಗೂ ಖ್ಯಾತ ಹಿನ್ನಲೆ ಗಾಯಕರನ್ನೊಳಗೊಂಡ ಆರ್ಕೆಸ್ಟ್ರಾ ಕಾಞಂಗಾಡ್ ತಂಡದ "ದೇವಗೀತಂ" ಸಾಂಸ್ಕøತಿಕ ಕಾರ್ರ್ಯಕ್ರಮ, ವಸಂತಕಟ್ಟೆ ಪೂಜೆ, ಅವಭೃತ ಸ್ನಾನ, ಶ್ರೀ ದುರ್ಗಾಸೇವೆಯ ಬಳಿಕ ವಿಶೇಷ ಬೆಡಿ ಸೇವೆ, ಶ್ರೀ ದೇವರ ಮಹಾದರ್ಶನ ಬಲಿ, ಬಟ್ಟಲು ಕಾಣಿಕೆ, ಶ್ರೀಗಂಧ ಪ್ರಸಾದ, ಧ್ವಜಾವರೋಹಣ, ಮಂಗಳಾರತಿ, ಮಾ.13ರಂದು ಬೆಳಗ್ಗೆ ನವಕಾಭಿμÉೀಕ, ಮಂತ್ರಾಕ್ಷತೆ, ಸಂಜೆ 4ರಿಂದ ಶ್ರೀ ದೇವರ ಪ್ರಧಾನ ದೈವ ಹುಲಿಭೂತ ಮತ್ತು ಪಟ್ಟದರಸು ಬಿರ್ನಾಳ್ವ ದೈವಗಳ ನೇಮ, ಅರಸಿನ ಹುಡಿ ಪ್ರಸಾದ ವಿತರಣೆ ನಡೆಯಲಿದೆ.
ಇಂದಿನಿಂದ ನೆಟ್ಟಣಿಗೆ ಕ್ಷೇತ್ರದ ಜಾತ್ರಾ ಮಹೋತ್ಸವ
0
ಮಾರ್ಚ್ 02, 2023