ಕಾಸರಗೋಡು: ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೇ 19 ರಂದು ನಡೆಯುವ ಸಾಮೂಹಿಕ ಮಹಾ ಚಂಡಿಕಾ ಯಾಗಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಸಹಯೋಗ ನೀಡಿದೆ.
ಯೋಜನೆಯ ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ ಮುಕೇಶ್ ಆರ್. ಅವರು ಯಾಗ ಸಮಿತಿಯ ಅಧ್ಯಕ್ಷ ಕೆ.ಎನ್.ವೆಂಕಟರಮಣ ಹೊಳ್ಳ ಅವರಿಗೆ ಹೂಗುಚ್ಛ ನೀಡಿ ಸಹಯೋಗ ಪ್ರಕಟಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ವಾಮನ್ ರಾವ್ ಬೇಕಲ್, ಯಾಗ ಸಮಿತಿಯ ಕಾರ್ಯದರ್ಶಿ ಪ್ರದೀಪ್ ಬೇಕಲ್ ಉಪಸ್ಥಿತರಿದ್ದರು.
ಮಹಾ ಚಂಡಿಕಾ ಯಾಗ: ಗ್ರಾಮಾಭಿವೃದ್ದಿ ಯೋಜನೆಯಿಂದ ಸಹಯೋಗ
0
ಮಾರ್ಚ್ 04, 2023