ತ್ರಿಪುರಾ: ತ್ರಿಪುರಾ ಅಸೆಂಬ್ಲಿ ಚುನಾವಣೆ 2023ರ ಮತಗಳ ಎಣಿಕೆ ಇಂದು (ಮಾರ್ಚ್ 2) ಬೆಳಗ್ಗೆ 8 ರಿಂದ ನಡೆಯುತ್ತಿದೆ. ಮಧ್ಯಾಹ್ನದ ವೇಳೆಗೆ ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆಯೇ ಅಥವಾ ಮತ್ತೊಮ್ಮೆ ಎಡಪಕ್ಷಗಳ ಆಡಳಿತ ಮರಳಲಿದೆಯೇ ಎಂಬುದು ಸ್ಪಷ್ಟವಾಗಿದೆ.
ಈ ಬಾರಿ ತ್ರಿಪುರಾದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದ್ದು ಸರ್ಕಾರ ರಚನೆ ಮಾಡಲಿದೆ.
ಚುನಾವಣಾ ಆಯೋಗದ ಪ್ರಕಾರ ಆಡಳಿತಾರೂಢ ಬಿಜೆಪಿ 60 ಸದಸ್ಯರ ಅಸೆಂಬ್ಲಿಯಲ್ಲಿ 34 ಸ್ಥಾನಗಳಲ್ಲಿ ಗೆದ್ದು ಸ್ಪಷ್ಟ ಬಹುಮತದ ಗಡಿಯನ್ನು ದಾಟಿ ಗೆಲುವಿನ ದಾಪುಗಾಲು ಹಾಕಿದೆ. ಸಿಪಿಐ(ಎಂ) 14 ಸ್ಥಾನಗಳನ್ನು ಪಡೆದಿದೆ.
ಈ ಮೂಲಕ ಮತ್ತೊಮ್ಮೆ ಸಿಎಂ ಮಾಣಿಕ್ ಸಹಾ ತಮ್ಮ ಸಿಎಂ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ತ್ರಿಪುರಾ ಸಿಎಂ ಮಾಣಿಕ್ ಸಹಾ ಅವರು ಟೌನ್ ಬರ್ಡೋವಾಲಿ ಕ್ಷೇತ್ರದಿಂದ ಕಾಂಗ್ರೆಸ್‌ನ ಹಿರಿಯ ನಾಯಕ ಆಶಿಶ್ ಕುಮಾರ್ ಅವರನ್ನು 1,257 ಮತಗಳ ಅಂತರದಿಂದ ಸೋಲಿಸಿದ್ದಾರೆ. ಸಹಾ ತಮ್ಮ ವಿಜಯದ ನಂತರ ತನ್ನ 'ಚುನಾವಣೆಯ ಪ್ರಮಾಣಪತ್ರ' ಸಂಗ್ರಹಿಸುವುದನ್ನು ನೋಡಿದರು
ಈ ಹಿನ್ನೆಲೆಯಲ್ಲಿ ಅಗರ್ತಲಾದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷದ ವಿಜಯೋತ್ಸವದ ಸಂಭ್ರಮಚಾರಣೆ ಕಾಣಸಿಕ್ಕಿದೆ.