HEALTH TIPS

ಪರಕೀಯ ಮಹಿಳೆಗೆ ಜನಿಸಿದ ಮಗ ದೇಶಭಕ್ತನಾಗಲು ಸಾಧ್ಯವಿಲ್ಲ; ರಾಹುಲ್​ ಗಾಂಧಿ ವಿರುದ್ಧ ಪ್ರಜ್ಞಾ ಠಾಕೂರ್ ವಾಗ್ದಾಳಿ

 

               ನವದೆಹಲಿ: ಪರಕೀಯ ಮಹಿಳೆಗೆ ಜನಿಸಿದ ಮಗ ಎಂದಿಗೂ ದೇಶಭಕ್ತನಾಗಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಸಾಬೀತು ಮಾಡಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿ ಸಂಸದೆ ಪ್ರಜ್ಞಾ ಠಾಕೂರ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ.

       ಲೋಕಸಭೆಯಲ್ಲಿ ಮೈಕ್‌ ಗಳು ಪ್ರತಿಪಕ್ಷಗಳು ಮಾತನಾಡುವ ವೇಳೆ ಹೆಚ್ಚಾಗಿ ಮೌನವಾಗಿರುತ್ತವೆ ಎಂದು ರಾಹುಲ್ ಲಂಡನ್‌ ನಲ್ಲಿ ಬ್ರಿಟಿಷ್ ಸಂಸದರಿಗೆ ಹೇಳಿದ್ದರು. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಾರತೀಯ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸುತ್ತಿದೆ. ರಾಹುಲ್ ಗಾಂಧಿ ವಿದೇಶಿ ನೆಲದಲ್ಲಿ ನೀಡಿದ ಕೆಲವು ಹೇಳಿಕೆಗಳಿಗಾಗಿ ಅವರನ್ನು ದೇಶದಿಂದ ಹೊರಹಾಕಬೇಕು ಎಂದು ಠಾಕೂರ್ ಹೇಳಿದರು.

'         ವಿದೇಶಿ ಮಹಿಳೆಗೆ ಜನಿಸಿದ ಮಗ ಎಂದಿಗೂ ದೇಶಭಕ್ತನಾಗಲು ಸಾಧ್ಯವಿಲ್ಲ' ಎಂದು ಚಾಣಕ್ಯ ಹೇಳಿದ್ದಾನೆ. ರಾಹುಲ್ ಗಾಂಧಿಯವರು ಅದನ್ನು ಸಾಬೀತುಪಡಿಸಿದ್ದಾರೆ. ನಿಮ್ಮ ತಾಯಿ (ಸೋನಿಯಾ ಗಾಂಧಿ) ಇಟಲಿಯಿಂದ ಬಂದಿರುವವರು, ಭಾರತದಿಂದ ಬಂದವರಲ್ಲ ಎಂದು ಠಾಕೂರ್ ಹೇಳಿ ಟೀಕೆ ಮಾಡಿದ್ದಾರೆ.

                  ನೀವು ಈ ದೇಶದ ನಾಯಕ, ಜನರಿಂದ ಚುನಾಯಿತರಾಗಿ ಈಗ ಸಾರ್ವಜನಿಕರನ್ನು ಅವಮಾನಿಸುತ್ತಿದ್ದೀರಿ. ವಿದೇಶದಲ್ಲಿ ಕುಳಿತಿರುವ ನೀವು ಸಂಸತ್ತಿನಲ್ಲಿ ಮಾತನಾಡಲು ನಿಮಗೆ ಅವಕಾಶ ಸಿಗುತ್ತಿಲ್ಲ ಎಂದು ಹೇಳುತ್ತಿದ್ದೀರಿ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ನೊಂದಿಲ್ಲ. ಅವರಿಗೆ ರಾಜಕೀಯದಲ್ಲಿ ಅವಕಾಶ ನೀಡಬಾರದು ಮತ್ತು ಅವರನ್ನು ದೇಶದಿಂದ ಹೊರಹಾಕಬೇಕು ಎಂದು ಠಾಕೂರ್ ಹೇಳಿದರು.

           'ಸಂಸತ್ತು ಸುಗಮವಾಗಿ ನಡೆದರೆ ಹೆಚ್ಚಿನ ಅಭಿವೃದ್ಧಿ ಕೆಲಸಗಳು ನಡೆಯುತ್ತವೆ. ಹೆಚ್ಚು ಕೆಲಸವಿದ್ದರೆ ಕಾಂಗ್ರೆಸ್ ನವರಿಗೆ ಉಳಿಗಾಲವಿಲ್ಲ. ಕಾಂಗ್ರೆಸ್ ಅಸ್ತಿತ್ವ ಕೊನೆಗೊಳ್ಳುವ ಹಂತದಲ್ಲಿದೆ. ಈಗ ಅವರ ಮನಸ್ಸು ಕೂಡ ಭ್ರಷ್ಟವಾಗುತ್ತಿದೆ' ಎಂದು ಕಾಂಗ್ರೆಸ್​​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries