ಕಾಸರಗೋಡು : ಮೂರು ತಿಂಗಳಿನಿಂದ ವೇತನ ಕೈಸೇರದ ಹಿನ್ನೆಲೆಯಲ್ಲಿ ಶಾಲಾ ಅಡುಗೆ ನಿರ್ಮಾಣ ಕಾರ್ಮಿಕರು ಕಾಸರಗೋಡು ಡಿಇಒ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಿದರು. ಎಐಟಿಯುಸಿ ನೇತೃತ್ವದಲ್ಲಿನಡೆದ ಸತ್ಯಾಗ್ರಹವನ್ನು ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಬಿಜು ಉಣ್ಣಿತ್ತನ್ ಉದ್ಘಾಟಿಸಿದರು. ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಿ ಸೇವೆ ಸಲ್ಲಿಸುವ, ಕಾಂರ್ಇಕರಿಗೆ ವೇತನ ಮಂಜೂರುಗೊಳಿಸಬೇಕು ಎಂದು ಆಗ್ರಹಿಸಿದರು. ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಮುಖೇಶ್ ಬಾಲಕೃಷ್ಣನ್, ರವೀಂದ್ರನ್ ಮಾಣಿಯಾಟ್, ಶೈನಿ ಕುಟ್ಟಪ್ಪನ್ ಮತ್ತು ಸಿಮಿ ಪಿಪಿ ಉಪಸ್ಥಿತರಿದ್ದರು. ಶೈಲಜಾ ಶೆಟ್ಟಿ, ಪ್ರೇಮಾ ನವೀನ್, ರೇವತಿ ಮುಕು, ಬೇಬಿ ನೇತೃತ್ವ ವಹಿಸಿದ್ದರು. ಕಿಶೋರ್ ಕೆ.ಟಿ. ಸ್ವಾಗತಿಸಿದರು. ಈ ಸಂದರ್ಭ ತಕ್ಷಣ ವೇತನ ಒದಗಿಸುವಂತೆ ಆಗ್ರಹಿಸಿ ಜಿಲ್ಲಾ ಶಿಕ್ಷಣ ಉಪನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಲಭಿಸದ ವೇತನ-ಶಾಲಾ ಅಡುಗೆ ಕಾರ್ಮಿಕರಿಂದ ಡಿಇಒ ಕಚೇರಿ ಎದುರು ಉಪವಾಸ ಸತ್ಯಾಗ್ರಹ
0
ಮಾರ್ಚ್ 06, 2023
Tags