HEALTH TIPS

ವಾಟ್ಸ್​ಆಯಪ್ ಸ್ಟೇಟಸ್‌ ಅವಾಂತರ; ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲು!

 

               ಮಹಾರಾಷ್ಟ್ರ: ಈಗಂತೂ ನಾವೆಲ್ಲಾ ನಮ್ಮ ದಿನದ ಕೆಲವು ಗಂಟೆಗಳನ್ನ ಸಾಮಾಜಿಕ ಮಾಧ್ಯಮಗಳನ್ನು ನೋಡುವುದರಲ್ಲಿಯೇ ಕಳೆಯುತ್ತೇವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ದಿನದ ಬಹುತೇಕ ಸಮಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​​ ಮಾಡುವುದು ಕಾಮೆಂಟ್ ಮಾಡುತ್ತಾ ಸಮಯ ವ್ಯರ್ಥ ಮಾಡುತ್ತೇವೆ.

ಇಲ್ಲೊಬ್ಬ ಯುವಕ ವಾಟ್ಸ್​ಆಯಪ್ ಸ್ಟೇಟಸ್‌ ಹಾಕಿ ಪೊಲೀಸರ ಅತಿಥಿಯಾಗಿದ್ದಾನೆ.

                      ಮೊಘಲ್ ದೊರೆ ಔರಂಗಜೇಬ್ ಅವರನ್ನು ಹೊಗಳಿ ವಾಟ್ಸ್​ಆಯಪ್ ಸ್ಟೇಟಸ್ ಹಾಕಿದ್ದ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ವ್ಯಕ್ತಿಯೊಬ್ಬ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

                   ವ್ಯಕ್ತಿ ತನ್ನ ವಾಟ್ಸ್​ಆಯಪ್ ಸ್ಟೇಟಸ್​​ನಲ್ಲಿ ಚಕ್ರವರ್ತಿ ಔರಂಗಜೇಬನನ್ನು ಹೊಗಳಿದ್ದು, ಮಾರ್ಚ್ 16 ರಂದು ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ, ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡದಂತೆ ಜನರನ್ನು ಮನವಿ ಮಾಡುತ್ತೇವೆಂದು ಅಧಿಕಾರಿ ತಿಳಿಸಿದ್ದಾರೆ.

                       ದೂರಿನ ಆಧಾರದ ಮೇಲೆ, ವಡ್ಗಾಂವ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 295 (ಯಾವುದೇ ವರ್ಗದ ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಪೂಜಾ ಸ್ಥಳವನ್ನು ಗಾಯಗೊಳಿಸುವುದು ಅಥವಾ ಅಪವಿತ್ರಗೊಳಿಸುವುದು) ಮತ್ತು ಭಾರತೀಯ ದಂಡ ಸಂಹಿತೆಯ ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries