HEALTH TIPS

ಇಎಂಎಸ್ ಕಲಿಕಾ ಕೇಂದ್ರದ ಉಪನ್ಯಾಸ ಮಾಲಿಕೆ: ಇಂದು ಚಾಲನೆ



              ಕಾಸರಗೋಡು: ಜಿಲ್ಲೆಯ ಪ್ರಮುಖ ಸಾಂಸ್ಕøತಿಕ ವೇದಿಕೆ ಇಎಂಎಸ್ ಕಲಿಕಾ ಕೇಂದ್ರದ ವರ್ಷದ ಉಪನ್ಯಾಸ ಮಾಲಿಕೆ ಮಾ. 25ರಂದು ಬೆಳಗ್ಗೆ 11ಕ್ಕೆ ಕಾಸರಗೋಡು ಹೊಸ ಬಸ್ ನಿಲ್ದಾಣ ಸನಿಹದ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಜರುಗಲಿದೆ. ಮಾಜಿ ಹಣಕಾಸು ಸಚಿವ ಡಾ. ಟಿ.ಎಂ.ಥಾಮಸ್ ಐಸಾಕ್ ಉದ್ಘಾಟಿಸುವರು ಎಂದು ಅಧ್ಯಯನ ಕೇಂದ್ರದ ಅಧ್ಯಕ್ಷ ಪಿ.ಕರುಣಾಕರನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
           ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಗಳೊಂದಿಗೆ ಇಎಂಎಸ್ ಕಲಿಕಾ ಕೇಂದ್ರ ಸಹಕರಿಸಿ ಕಾರ್ಯಾಚರಿಸುತ್ತಿದೆ.  ಕಾಸರಗೋಡು ಭಾಷೆ, ಸಾಂಸ್ಕøತಿಕ ವೈವಿಧ್ಯತೆ ಮತ್ತು ಬಹುತ್ವ, ರಾಜಕೀಯ, ಪರಿಸರ, ಅರ್ಥಶಾಸ್ತ್ರ, ಪುರಾಣ ಮತ್ತು ಪ್ರತ್ಯೇಕ ಸಮುದಾಯಗಳ ಕುರಿತು ಸಂಶೋಧನೆ ಮತ್ತು ಅಧ್ಯಯನಗಳನ್ನು ನಡೆಸಲಾಗುವುದು. ಜಿಲ್ಲೆಯ ಬಗ್ಗೆ ಎಲ್ಲಾ ಸಮೀಕ್ಷೆಗಳನ್ನು ಸಂಗ್ರಹಿಸಲಾಗುವುದು. ಶಿಕ್ಷಣ ತಜ್ಞರನ್ನು ಒಟ್ಟುಗೂಡಿಸಲಾಗುವುದು. ವಿವಿಧ ವಿಷಯಗಳ ಕುರಿತು ವಿಚಾರ ಸಂಕಿರಣ, ಚರ್ಚೆ ಮತ್ತು ಅಧ್ಯಯನ ತರಗತಿಕೂಡ ಆಯೋಜಿಸಲಾಗುವುದು. ಡಿಜಿಟಲ್ ಸೌಲಭ್ಯ ಹೊಂದಿರುವ ಗ್ರಂಥಾಲಯವು ಸ್ಮರಣಿಕೆಗಳು, ಡೈರಿಗಳು, ಆತ್ಮಚರಿತ್ರೆ ಮತ್ತು ಪತ್ರಗಳನ್ನು ಸಹ ಸಂಗ್ರಹಿಸುಲಾಗುತ್ತದೆ. ಇದು ಜಿಲ್ಲೆಯ ಅತ್ಯುತ್ತಮ ಉಲ್ಲೇಖ ಗ್ರಂಥಾಲಯವಾಗಲಿದೆ ಎಂದು ತಿಳಿಸಿದರು.
                        ಕೇಂದ್ರಕ್ಕೆ ಜಮೀನು:
            ಇಎಂಎಸ್ ಅಧ್ಯಯನ ಕೇಂದ್ರಕ್ಕೆ ಕಾರಡ್ಕ ಸನಿಹದ ನೆಲ್ಲಿಯಡ್ಕ ಬಳಿ ಎರಡೂವರೆ ಎಕರೆ ಜಮೀನು ಹೊಂದಿದೆ. ಬೆಂಗಳೂರಿನ ಎಡಪಂಥೀಯ ಕಾರ್ಯಕರ್ತ ಡಾ. ಸುಬ್ಬರಾವ್ ಮತ್ತು ಅವರ ಕುಟುಂಬದವರು ಜಮೀನು ಒದಗಿಸಿಕೊಟ್ಟಿದ್ದಾರೆ.  ಇತ್ತೀಚೆಗೆ ನೆಲ್ಲಿಯಡುಕ್ಕು ಬಳಿ ನಡೆದ ಸಮಾರಂಭದಲ್ಲಿ ಸಿಪಿಐ-ಎಂ ಪಾಲಿಟ್‍ಬ್ಯುರೊ ಸದಸ್ಯ ಎಂ.ಎ.ಬೇಬಿ ಅವರಿಗೆ ಜಾಗದ ದಾಖಲೆಗಳನ್ನು ಹಸ್ತಾಂತರಿಸಲಾಗಿದೆ. ಇಲ್ಲಿ ವಿಶಾಲ ಕಟ್ಟಡ ಸ್ಥಾಪಿಸುವ ಕುರಿತು ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಇಳಿಸಿದರು.
                    ಸುದ್ದಿಗೋಷ್ಠಿಯಲ್ಲಿ ಶಾಸಕ ಸಿ.ಎಚ್.ಕುಂಜಂಬು,  ಡಾ. ಸಿ ಬಾಲನ್, ಜಯಚಂದ್ರನ್ ಕುಟ್ಟಮತ್ ಭಾಗವಹಿಸಿದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries