ಉಪ್ಪಳ: ಯುವಶಕ್ತಿ ಫ್ರೆಂಡ್ಸ್ ಮುಳಿಂಜ ಇದರ ಮೂರನೇ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಮುಳಿಂಜ ಶ್ರೀಮಹಾಲಿಂಗೇಶ್ವರ ಕ್ಷೇತ್ರ ಜಾತ್ರಾ ಮಹೋತ್ಸವದಂಗವಾಗಿ ಕ್ಷೇತ್ರ ಪರಿಸರದಲ್ಲಿ ಜರಗಿತು. ಇದರ ಅಂಗವಾಗಿ ನಡೆದ ಸಭಾ ಕಾರ್ಯಕ್ರಮವನ್ನು ಕೊಂಡೆವೂರು ಶ್ರೀಯೋಗಾನಂದ ಸರಸ್ವತಿ ಸ್ವಾಮಿಜಿಗಳು ಉದ್ಘಾಟಿಸಿ ಆಶೀರ್ವಚನವಿತ್ತರು.
ಮುಳಿಂಜ ಶ್ರೀಮಹಾಲಿಂಗೇಶ್ವರ ಕ್ಷೇತ್ರ ಸಮಿತಿ ಅಧ್ಯಕ್ಷ ಹರಿನಾಥ ಭಂಡಾರಿ ಸಭೆಯ ಅಧ್ಯಕ್ಷತೆವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ, ಉಪ್ಪಳ ಭಗವತೀ ಕ್ಷೇತ್ರ ಅಧ್ಯಕ್ಷ ಸುಕುಮಾರ ಯು, ಕ್ಷೇತ್ರದ ಮಾತೃಮಂಡಳಿ ಅಧ್ಯಕ್ಷೆ ಸರಸ್ವತಿ ಎನ್ ಶೆಟ್ಟಿ ಕೋಡಿಬೈಲು, ಯುವಶಕ್ತಿ ಫ್ರೆಂಡ್ಸ್ ಕ್ಲಬ್ಬಿನ ಉಪಾಧ್ಯಕ್ಷ ದಿನೇಶ್ ಭಂಡಾರಿ ಮುಳಿಂಜಗುತ್ತು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಹಿರಿಯ ನಾಟಿ ವೈದ್ಯ ಸಂಜೀವ ಭಂಡಾರಿ ಮುಳಿಂಜ ಗುತ್ತು, ಹಿರಿಯ ಸ್ಯಾಕ್ಸೋಫೆÇೀನ್ ವಾದಕ ಅನಂತ ಪದ್ಮನಾಭ ಐಲ ಅವರನ್ನು ಸನ್ಮಾನಿಸಲಾಯಿತು. ಮಿಥಿಲ್ ವಿ.ರೈ, ತೃಷಾ ರೈ ಸನ್ಮಾನಿತರ ಪತ್ರ ವಾಚಿಸಿದರು. ಗಾಯತ್ರಿ ಕೊಂಡೆವೂರು ಪ್ರಾರ್ಥನೆ ಹಾಡಿದರು. ಸರ್ವೇಶ್ ಕೊರಂಬಳ ಸ್ವಾಗತಿಸಿ, ದಿನೇಶ್ ಮುಳಿಂಜ ವಂದಿಸಿದರು. ಭಾಸ್ಕರ್ ಉಪ್ಪಳ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಅಮ್ಮ ಕಲಾವಿದರಿಂದ ಅಲೆ ಬುಡಿಯೆರ್ ಗೆ ತುಳು ನಾಟಕ ಪ್ರದರ್ಶನಗೊಂಡಿತು.