ಜಿನೀವಾ : ಜಿನೀವಾದಲ್ಲಿನ
ವಿಶ್ವಸಂಸ್ಥೆಯ ಕಟ್ಟಡದಲ್ಲಿ ದುರುದ್ದೇಶಪೂರಿತ ಭಾರತ ವಿರೋಧಿ ಬರಹ ಪತ್ತೆಯಾಗಿದ್ದು, ಈ
ವಿಚಾರವಾಗಿ ಸ್ವಿಸ್ ರಾಯಭಾರಿಗೆ ಭಾರತ ಸಮನ್ಸ್ ನೀಡಿದೆ. ಜಿನೀವಾ: ಜಿನೀವಾದಲ್ಲಿನ
ವಿಶ್ವಸಂಸ್ಥೆಯ ಕಟ್ಟಡದಲ್ಲಿ ದುರುದ್ದೇಶಪೂರಿತ ಭಾರತ ವಿರೋಧಿ ಬರಹ ಪತ್ತೆಯಾಗಿದ್ದು, ಈ
ವಿಚಾರವಾಗಿ ಸ್ವಿಸ್ ರಾಯಭಾರಿಗೆ ಭಾರತ ಸಮನ್ಸ್ ನೀಡಿದೆ.
ಘಟನೆಯನ್ನು ಪ್ರತಿಭಟಿಸಿರುವ ಭಾರತದ ವಿದೇಶಾಂಗ ಸಚಿವಾಲಯಕ್ಕೆ ಸ್ವಿಸ್ ರಾಯಭಾರಿ,
ಭಾರತದ ವಿರೋಧವನ್ನು ಬರ್ನ್ಗೆ ಮನವರಿಕೆ ಮಾಡುವುದಾಗಿ ಹೇಳಿದ್ದಾರೆ. ವಿದೇಶಾಂಗ ಇಲಾಖೆಯ
ಕಾರ್ಯದರ್ಶಿ ಇಂದು ಸ್ವಿಸ್ ರಾಯಭಾರಿಯನ್ನು ಭೇಟಿ ಮಾಡಿ ವಿಶ್ವಸಂಸ್ಥೆ ಕಟ್ಟಡದಲ್ಲಿ
ಕಂಡುಬಂದಂತಹ ಭಾರತ ವಿರೋಧಿ ಬರಹದ ಬಗ್ಗೆ ಪ್ರತಿಭಟನೆಯನ್ನು ದಾಖಲಿಸಿದರು ಎಂದು ಸರ್ಕಾರದ
ಮೂಲಗಳು ತಿಳಿಸಿವೆ. ಪ್ರತಿಭಟನೆಗೆ ಎಲ್ಲರಿಗೂ ಅವಕಾಶ ಇದೆ ಆದರೂ ಈ ರೀತಿಯ
ಪ್ರತಿಭಟನೆಗಳು ಸ್ವಿಸ್ ಸರ್ಕಾರದ ನಿಲುವುಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಅಲ್ಲಿನ
ಸರ್ಕಾರ ಸ್ಪಷ್ಟನೆ ನೀಡಿದೆ.