ಕಾಸರಗೋಡು: ಭಾರತೀಯ ವಕೀಲರ ಪರಿಷತ್ ಕಾಸರಗೋಡು ಜಿಲ್ಲಾ ಸಮ್ಮೇಳನ ಕಾಸರಗೋಡು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಹಾಲ್‍ನ 'ವಕೀಲ ಪಿ. ಸುಹಾಸ್ ನಗರ'ದಲ್ಲಿ ಜರುಗಿತು. ಮಂಗಳೂರು ವಕೀಲರ ಸಂಘದ ಅಧ್ಯಕ್ಷ ವಕೀಲ ಕೆ. ಪೃಥ್ವಿರಾಜ್ ರೈ ಸಮಾರಂಭ ಉದ್ಘಾಟಿಸಿದರು.
ಭಾರತೀಯ ವಕೀಲರ ಪರಿಷತ್ ಕಾಸರಗೋಡು ಜಿಲ್ಲಾಧ್ಯಕ್ಷ ವಕೀಲ ಸಿ.ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ವಕೀಲವೃತ್ತಿಯಲ್ಲಿ 25ವರ್ಷ ಸೇವೆ ಪೂರೈಸಿದ ಅಲಿಶ್ ಕೃಷ್ಣನ್, ಎಲ್ ಸಿ ಜಾರ್ಜ್, ಸಂಧ್ಯಾ ಪ್ರಭು, ಜಯ ಅಡೂರ್, ಕುಸುಮಾ, ಕೆ.ಎಂ. ಬೀನಾ, ಸಾಮಾಜಿಕ ಜಾಲ ತಾಣದಲ್ಲಿ 'ಭಟ್ ಏಂಡ್ ಭಟ್' ಪ್ರವರ್ತಕರಾದ ವಕೀಲ ಬಿ. ಸುದರ್ಶನ್, ಹಾಗೂ ವಕೀಲ ಬಿ. ಮನೋಹರ್ ಅವರನ್ನು ಅಬಿನಂದಿಸಲಾಯಿತು. ಸಮರಂಭದಲ್ಲಿ ಮುನ್ಸಿಫ್ ಸ್ನಾತಕೋತ್ತರ ಪರೀಕ್ಷೆಗಿರುವ ಪುಸ್ತಕಗಳನ್ನು ವಿತರಿಸಲಾಯಿತು, ಭಾರತೀಯ ವಕೀಲರ ರಾಷ್ಟ್ರೀಯ ಪರಿಷತ್ ಸದಸ್ಯ ವಕೀಲರಾದ ಎನ್.ರಾಜೀವನ್, ಕೆ. ರಾಜೇಶ್, ಕೆ. ಕರುಣಾಕರನ್ ನಂಬಿಯಾರ್, ಹೊಸದುರ್ಗ ಘಟಕದ ಅಧ್ಯಕ್ಷ ಕೆ. ಜಿ. ಅನಿಲ್, ರಾಜ್ಯ ಉಪಾಧ್ಯಕ್ಷ ಬಿ. ರವೀಂದ್ರನ್ ಉಪಸ್ಥಿತರಿದ್ದರು. ಭಾರತೀಯ ವಕೀಲರ ಪರಿಷತ್ ಜಿಲ್ಲಾ ಕಾರ್ಯದರ್ಶಿ ಪಿ. ಮುರಳೀಧರನ್ ಸ್ವಾಗತಿಸಿದರು. ಕಾಸರಗೋಡು ಘಟಕದ ಅಧ್ಯಕ್ಷ ಎಸ್.ಕೆ ಪ್ರಜಿತ್ ವಂದಿಸಿದರು.