ಕಾಸರಗೋಡು: ಕೇರಳ ರಾಜ್ಯ ಯುವ ಕಲ್ಯಾಣ ಮಂಡಳಿ ನೇತೃತ್ವದಲ್ಲಿ ಕಾಸರಗೋಡು ಜಿಲ್ಲೆಯ ಚೆರುವತ್ತೂರು ಕಾವುಂಚಿರದಲ್ಲಿ ರಾಜ್ಯ ಕಬಡ್ಡಿ ಫೆಸ್ಟ್ ಆರಂಭವಾಯಿತು.
ಜಿಲ್ಲಾ ಪೊಲೀಸ್ ವರಿಷ್ಠ ಡಾ. ವೈಭವ್ ಸಕ್ಸೇನಾ ಪಂದ್ಯಾವಳಿಯನ್ನು ಉದ್ಘಾಟಿಸಿದರು. ಸಂಘಟನಾ ಸಮಿತಿ ಅಧ್ಯಕ್ಷರೂ, ಚೆರ್ವತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ . ವಿ. ಪ್ರಮೀಳಾ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಫುಟ್ಬಾಲ್ ಆಟಗಾರ ಐ.ಎಂ ವಿಜಯನ್ ಮುಖ್ಯ ಅತಿಥಿಯಾಗಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ.ವಿ.ರಾಘವನ್, ಪಂಚಾಯಿತಿ ಸದಸ್ಯರಾದ ಕೆ.ರಮಣಿ, ಸಿ.ಎ. ಅಂಬಾಡಿ, ಅನಿಲ್ ಬಂಗಳಂ, ರಾಜ್ಯ ಕ್ರೀಡಾ ಪರಿಷತ್ ಸದಸ್ಯ ಟಿ.ವಿ.ಬಾಲನ್ ಮಾತನಾಡಿದರು, ಪ್ರಧಾನ ಸಂಚಾಲಕ ಟಿ.ವಿ.ಕೃಷ್ಣನ್ ಸ್ವಾಗತಿಸಿ, ಜಿಲ್ಲಾ ಯುವ ಕಾರ್ಯಕ್ರಮ ಅಧಿಕಾರಿ ಪಿ.ಸಿ.ಶಿಲಾಸ್ ವಂದಿಸಿದರು.
ಮಾಜಿ ಸಂಸದ ಪಿ ಕರುಣಾಕರನ್, ಸಂಘಟನಾ ಸಮಿತಿ ಉಪಾಧ್ಯಕ್ಷ ರಾಜೀಶ್ ವೆಲ್ಲಟ್ ಮತ್ತು ಯುವ ಕಲ್ಯಾಣ ಮಂಡಳಿ ಸದಸ್ಯ ದೀಪು ಪ್ರೇಮನಾಥ್ ಆಟಗಾರರನ್ನು ಪರಿಚಯಿಸಿದರು. ಪುರುಷರ ವಿಭಾಗದಲ್ಲಿ 12 ಹಾಗೂ ಮಹಿಳೆಯರ ವಿಭಾಗದಲ್ಲಿ ಏಳು ತಂಡಗಳು ಪ್ರಾಥಮಿಕ ಸುತ್ತಿನ ಪಂದ್ಯದಲ್ಲಿ ಸ್ಪರ್ಧಿಸಿದ್ದವು. ಕಬಡ್ಡಿ ಉತ್ಸವದ ಎರಡನೇ ದಿನವಾದ 18ರಂದು ರಾತ್ರಿ ಖ್ಯಾತ ಜಾನಪದ ಕಲಾವಿದೆ ಪ್ರಸೀತಾ ಚಾಲಕುಡಿ ಅವರಿಂದ ಜಾನಪದ ಸಂಗೀತ ಕಾರ್ಯಕ್ರಮವೂ ನಡೆಯಿತು.
ಕೊನೆಯ ದಿನವಾದ ಭಾನುವಾರ ತ್ರಿಕರಿಪುರ ಕ್ಷೇತ್ರದ ಶಾಸಕ ಎಂ.ರಾಜಗೋಪಾಲನ್ ಶಾಸಕರ ಅಧ್ಯಕ್ಷತೆಯಲ್ಲಿ ಕಬಡ್ಡಿ ಫೆಸ್ಟ್‍ನ ಸಮಾರೋಪ ಸಮಾರಂಭವನ್ನು ಪುರಾತತ್ವ ಸಚಿವ ಅಹ್ಮದ್ ದೇವರಕೋವಿಲ್ ಉದ್ಘಾಟಿಸಿದರು. ಯುವ ಕಲ್ಯಾಣ ಮಂಡಳಿ ಸದಸ್ಯ ಶರೀಫ್ ಪಾಲೋಳಿ, ಬಿಆರ್ ಡಿಸಿಎ, ಎಂಡಿ ಶಿಜಿನ್ ಪರಂಪತ್, ಎ.ಜಿ.ಬಶೀರ್, ಸಮಾಜಸೇವಕ ಟಿ.ಕೆ.ಸಿ.ಹಾಜಿ ಮಾತನಾಡಿದರು. ಯುವಜನ ಕಲ್ಯಾಣ ಮಂಡಳಿ ಸದಸ್ಯ ದೀಪು ಪ್ರೇಮನಾಥ್ ಸ್ವಾಗತಿಸಿ, ಕಾಸರಗೋಡು ಜಿಲ್ಲಾ ಯುವ ಸಮನ್ವಯಾಧಿಕಾರಿ ಎ.ವಿ.ಶಿವಪ್ರಸಾದ್ ವಂದಿಸಿದರು.