ತಿರುವನಂತಪುರಂ: ಹೆರಿಗೆಯಾದ ಎಂಟನೇ ದಿನಕ್ಕೆ ಕೇರಳ ವಿಶ್ವವಿದ್ಯಾಲಯದ ಉದ್ಯೋಗಿಯೊಬ್ಬರನ್ನು ಕೆಲಸಕ್ಕೆ ಕರೆದಿರುವ ಘಟನೆಯೊಂದು ವರದಿಯಾಗಿದೆ.
ಜೊತೆಗೆ ಉಪನೋಂದಣಾಧಿಕಾರಿ ಕೆಲಸಕ್ಕೆ ಬರುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಮಹಿಳೆ ಕೇರಳ ವಿಶ್ವವಿದ್ಯಾಲಯದ ಸಿಬ್ಬಂದಿ ಸಂಘದ ಉಪಕುಲಪತಿಗೆ ದೂರು ನೀಡಿದ್ದಾರೆ.
ಯುವತಿ ಕೆಲ ದಿನಗಳಿಂದ ರಜೆ ಮೇಲೆ ಪತಿಯೊಂದಿಗೆ ವಿದೇಶದಲ್ಲಿದ್ದಾರೆ. ತಂದೆ ತೀರಿಕೊಂಡ ನಂತರ ಯುವತಿ ವಿದೇಶಕ್ಕೆ ತೆರಳಿದ್ದರು. ಗರ್ಭಿಣಿಯಾಗಿರುವ ಕಾರಣ ವಿಸ್ತೃತ ರಜೆ ನೀಡುವಂತೆ ಕೋರಿದ್ದರು. ಆ ಬಳಿಕ ಮಹಿಳೆ ಇದೇ ತಿಂಗಳ 8ರಿಂದ ರಜೆಯಲ್ಲಿದ್ದರು. 10ರಂದು ಅವರಿಗೆ ಹೆರಿಗೆಯಾಗಿತ್ತು. ಹೆರಿಗೆಯಾಗಿ ಎಂಟು ದಿನದೊಳಗೆ ಕೆಲಸಕ್ಕೆ ಮರಳುವಂತೆ ಸೂಚಿಸಲಾಗಿದೆ ಎಂದು ಮಹಿಳೆ ದೂರಿದ್ದಾರೆ.
ಘಟನೆಯ ಬಗ್ಗೆ ವಿವರಿಸಲು ವಿಶ್ವವಿದ್ಯಾಲಯಕ್ಕೆ ಬಂದಾಗ, ಉಪ ನೋಂದಣಾಧಿಕಾರಿ ಸೇರಿದಂತೆ ಇತರರು ತನ್ನನ್ನು ತುಂಬಾ ಕೆಟ್ಟದಾಗಿ ನಡೆಸಿಕೊಂಡರು ಮತ್ತು ಇದು ತನ್ನನ್ನು ಮಾನಸಿಕವಾಗಿ ದುರ್ಬಲಗೊಳಿಸಿದೆ ಎಂದು ಮಹಿಳೆ ಹೇಳಿದ್ದಾರೆ.
ಹೆರಿಗೆಯಾಗಿ ಎಂಟನೇ ದಿನಕ್ಕೆ ಕೇರಳ ವಿಶ್ವವಿದ್ಯಾಲಯದ ಉದ್ಯೋಗಿಯೊಬ್ಬರನ್ನು ಹಾಜರಾಗಲು ಸೂಚಿಸಿದ ಅಧಿಕೃತರು
0
ಮಾರ್ಚ್ 20, 2023