ಮಧುಮೇಹ ಬಂದ ಮೇಲೆ ಸಿಹಿ ಶತ್ರುವಾಗುತ್ತದೆ. ಸಿಹಿ ತಿಂದರೆ ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ ಆದ್ದರಿಂದ ಸಿಹಿ ಪದಾರ್ಥಗಳನ್ನು ದೂರವಿಡುವಂತೆ ವೈದ್ಯರು ಮಧುಮೇಹಿಗಳಿಗೆ ಸೂಚಿಸುತ್ತಾರೆ. ಸಿಹಿ ಪದಾರ್ಥಗಳೆಂದರೆ ಬರೀ ಸಕ್ಕರೆ ಹಾಕಿ ತಯಾರಿಸಿರುವ ಸಿಹಿ ಪದಾರ್ಥಗಳು ಮಾತ್ರವಲ್ಲ ಕೆಲವೊಂದು ಸಿಹಿ ಹಣ್ಣುಗಳು ಕೂಡ ಮಧುಮೇಹಿಗಳಿಗೆ ಒಳ್ಳೆಯದಲ್ಲ.
ಹೀಗಿರುವಾಗ ಮಧುಮೇಹಿಗಳು ಜೇನು ತಿನ್ನಬಹುದೇ ಎಂಬ ಪ್ರಶ್ನೆ ಹಲವರಲ್ಲಿದೆ, ಮಧುಮೇಹಿಗಳು ಜೇನು ಬಳಸಬಹುದೇ? ಬಳಸುವುದಾದರೆ ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು ಎಂದು ನೋಡೋಣ:
ಸಕ್ಕರೆ ಆರೋಗ್ಯಕರವಲ್ಲ, ಆದರೆ ಜೇನು ಆರೋಗ್ಯಕರ
ಸಕ್ಕರೆಗೆ ಹೋಲಿಸಿದರೆ ಜೇನು ಆರೋಗ್ಯಕರ. ಎಷ್ಟೋ ಜನರು ಸಕ್ಕರೆ ಬಳಸುವುದೇ ಇಲ್ಲ,
ಅದರಲ್ಲಿ ಫಿಟ್ನೆಸ್ ಕಡೆ ತುಂಬಾ ಗಮನ ಕೊಡುವವರು ಸಕ್ಕರೆ ಬಳಸುವುದೇ ಇಲ್ಲ, ಇನ್ನು
ಸಕ್ಕರೆ ತಿನ್ನದಿದ್ದರೆ ಕ್ಯಾನ್ಸರ್ ಸೇರಿ ಅನೇಕ ರೋಗಗಳನ್ನು ತಡೆಗಟ್ಟಬಹುದು ಎಂದು
ವೈದ್ಯರು ಹೇಳುತ್ತಾರೆ. ಆದರೆ ಜೇನು ಆ ರೀತಿಯಲ್ಲ. ಇದರಲ್ಲಿ ಅನೇಕ ಆರೋಗ್ಯಕರ
ಗುಣಗಳಿವೆ. ಅನೇಕ ಕಾಯಿಲೆಗಳಿಗೆ ಮನೆಮದ್ದಾಗಿ ಜೇನನ್ನು ಬಳಸಲಾಗುವುದು. ಜೇನು
ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು.
ಜೇನು ಸೇವಿಸಿದರೆ ಮಧುಮೇಹಿಗಳಲ್ಲಿ ಸಕ್ಕರೆಯಂಶ ಹೆಚ್ಚಾಗುವುದೇ?
ಜೇನು ಸಕ್ಕರೆಗಿಂಥ ಹೆಚ್ಚು ಸಿಹಿಯಾಗಿರುತ್ತದೆ. ಆದರೆ ಜೇನು ತಿಂದರೆ ಮಧುಮೇಹಿಗಳಿಗೆ
ಅಪಾಯಕಾರಿಯೇ ಎಂದು ನೋಡುವುದಾದರೆ ಇದು ಇನ್ಸುಲಿನ್ ಅಧಿಕ ಮಾಡುವುದಾದರೂ ಉರಿಯೂತ ಕಡಿಮೆ
ಮಾಡುತ್ತದೆ, ಆದ್ದರಿಂದ ಜೇನು ಮಧುಮೇಹಿಗಳು ಬಳಸಲೇಬಾರದು ಎಂದು ಯಾವ ಸಂಶೋಧನೆಯೂ
ಹೇಳಿಲ್ಲ.
ಮಧುಮೇಹಿಗಳಿಗೆ ಜೇನು ತಿಂದರೆ ಆಗುವ ತೊಂದರೆಗಳು
* ಮಧುಮೇಹಿಗಳು ಜೇನನ್ನು ಮಿತಿಯಲ್ಲಿ ಸೇವಿಸಬೇಕು. ಇಲ್ಲದಿದ್ದರೆ ರಕ್ತದಲ್ಲಿ ಸಕ್ಕರೆಯಂಶ ಅಧಿಕವಾಗುವುದು.
* ಜೇನು ಸಕ್ಕರೆಗಿಂತ ತುಂಬಾನೇ ಸಿಹಿಯಾಗಿರುತ್ತದೆ, ಆದ್ದರಿಂದ ಸಕ್ಕರೆ ಒಂದು ಚಮಚ
ಬಳಿಸಿದರೆ ಜೇನು 1/4 ಚಮಚ ಬಳಿಸಿದರೆ ಸಾಕು, ಆದ್ದರಿಂದ ಮಧಮೇಹಿಗಳು ಜೇನು ಬಳಸುವುದಾದರೆ
ತುಂಬಾನೇ ಕಡಿಮೆ ಸೇವಿಸಬೇಕು.
* ಜೇನನ್ನು ಒಂದು ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ನೀಡಬಾರದು. ಜೇನು ನೀಡಿದರೆ ಅವರ ಪ್ರಾಣಕ್ಕೆ ಅಪಾಯ ಉಂಟಾಗಬಹುದು.
* ನೀವು ಮರುಕಟ್ಟೆಯಿಂದ ಜೇನು ಬರಿಸಿದರೆ ಅದು ಕಲಬೆರಿಕೆಯಲ್ಲ ಎಂದು ಸಾಬೀತಾದರೆ ಮಾತ್ರ
ಬಳಸಿ. ಕೆಲವರು ಜೇನು ಜೊತೆಗೆ ಸಕ್ಕರೆ ಅಥವಾ ಬೆಲ್ಲ ಸೇರಿಸಿ ಕಲಬೆರಿಕೆ ಮಾಡುತ್ತಾರೆ,
ಅಂಥ ಜೇನು ಬಳಸಬೇಡಿ.
ಮಧುಮೇಹಿಗಳು ಜೇನನ್ನು ಬಳಸಿ, ಆದರೆ ಅತಿಯಾಗಿ ಬಳಸಬೇಡಿ, ಅಪರೂಪಕ್ಕೆ ಮಿತಿಯಲ್ಲಿ ಸೇವಿಸಿ.