ತಿರುವನಂತಪುರ: ಪ್ರತಿಪಕ್ಷಗಳು ಪ್ರತಿಭಟನೆಯ ನೆಪದಲ್ಲಿ ವಿಧಾನಸಭೆ ಕಲಾಪವನ್ನು ಮೊಟಕುಗೊಳಿಸಿದೆ. ಅಧಿವೇಶನ ಕಡಿತಗೊಳಿಸುವ ನಿರ್ಣಯವನ್ನು ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಮಂಡಿಸಿದರು.
ಇಂದು ಅಧಿವೇಶನವನ್ನು ಅನಿರ್ದಿಷ್ಟ ಅವಧಿಗೆ ವಿಸರ್ಜಿಸಲಾಯಿತು. ಈ ತಿಂಗಳ 30ರ ವರೆಗೆ ಸಭೆ ನಿಗದಿಯಾಗಿತ್ತು.
ಇಂದು ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ಪ್ರತಿಭಟನೆಯನ್ನು ತೀವ್ರಗೊಳಿಸಿವೆ. ಸದನದಲ್ಲಿನ ತಾರತಮ್ಯ ವಿರೋಧಿಸಿ ಐವರು ವಿಪಕ್ಷ ಶಾಸಕರು ವಿಧಾನಸಭೆಯ ಮಧ್ಯದಲ್ಲಿ ಅನಿರ್ದಿμÁ್ಟವಧಿ ಸತ್ಯಾಗ್ರಹ ಆರಂಭಿಸಿದರು. ಉಮಾ ಥಾಮಸ್, ಅನ್ವರ್ ಸಾದತ್, ಟಿ.ಜೆ.ವಿನೋದ್, ಕುರುಕೋಳಿ ಮೊಯ್ತೀನ್ ಮತ್ತು ಎಕೆಎಂ ಅಶ್ರಫ್ ಇಂದಿನಿಂದ ಪ್ರತಿಭಟನೆಯ ಸೂಚನೆ ನೀಡಿದ್ದಾರೆ.
ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದ ಪ್ರತಿಪಕ್ಷಗಳು ಸಮಸ್ಯೆ ಬಗೆಹರಿಸಲು ಸರಕಾರ ಪ್ರಯತ್ನಿಸುತ್ತಿಲ್ಲ ಎಂದು ಆರೋಪಿಸಿದರು. ವಿಡಿ ಸತೀಶನ್ ಅವರು ಸರಕಾರವು ದಿಟ್ಟ ಕ್ರಮಗಳನ್ನು ತೆಗೆದುಕೊಂಡರೂ, ಪ್ರತಿಪಕ್ಷಗಳು ಎತ್ತಿರುವ ಬೇಡಿಕೆಗಳಿಂದ ಹಿಂದೆ ಸರಿಯುವುದಿಲ್ಲ ಎಂದು ಘೋಷಿಸಿದರು.
ಮುಂದುವರಿದ ಪ್ರತಿಪಕ್ಷಗಳ ಪ್ರತಿಭಟನೆ: ಐವರು ಶಾಸಕರಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ: ವಿಧಾನಸಭೆ ಕಲಾಪ ಮೊಟಕು
0
ಮಾರ್ಚ್ 21, 2023