ತಿರುವನಂತಪುರಂ: ರಾಜ್ಯದ ಶಾಲೆಗಳಲ್ಲಿ ಒಂದನೇ ತರಗತಿ ಪ್ರವೇಶ ವಯಸ್ಸು 5 ವರ್ಷ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸಚಿವ ವಿ.ಶಿವನ್‍ಕುಟ್ಟಿ ಹೇಳಿದ್ದಾರೆ.
ಐದು ವರ್ಷಕ್ಕೆ ಮಕ್ಕಳನ್ನು ಒಂದನೇ ತರಗತಿಗೆ ಸೇರಿಸುವುದು ರಾಜ್ಯದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ.
ಸಮಾಜವನ್ನು ಜಾಗೃತಗೊಳಿಸುವ ಮೂಲಕವಷ್ಟೇ ಪ್ರವೇಶ ವಯಸ್ಸನ್ನು ಸ್ವಾಭಾವಿಕವಾಗಿ ಹೆಚ್ಚಿಸಬಹುದು. ಆದ್ದರಿಂದ ಐದನೇ ವರ್ಷಕ್ಕೆ ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಲು ಬಯಸುವ ಪೋಷಕರಿಗೆ ಮುಂದಿನ ಶೈಕ್ಷಣಿಕ ವರ್ಷದಲ್ಲೂ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವ ವಿ.ಶಿವನ್‍ಕುಟ್ಟಿ ತಿಳಿಸಿದರು.
ಕೇರಳದ ಶಿಕ್ಷಣ ಮಾದರಿ ಇಡೀ ದೇಶಕ್ಕೆ ಮಾದರಿಯಾಗಿದೆ. ಕೇರಳದಲ್ಲಿ ಶಾಲಾ ಶಿಕ್ಷಣವು ಫೆಡರಲ್ ವ್ಯವಸ್ಥೆಯೊಳಗೆ ಕೆಲಸ ಮಾಡಲು ಎಲ್ಲಾ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದೆ. ಅದರ ಲಾಭವನ್ನೂ ಪಡೆದಿದೆ. ಕೇರಳದ ಎಲ್ಲಾ ಬಹುತೇಕ ಮಕ್ಕಳು ಶಾಲೆಗೆ ಹೋಗುತ್ತಾರೆ. ಎಲ್ಲರೂ ಅಧ್ಯಯನದ ನಿರಂತರತೆಯನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ 12 ನೇ ತರಗತಿಯನ್ನು ತಲುಪುತ್ತಾರೆ ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ಒಂದನೇ ತರಗತಿ ಪ್ರವೇಶ ವಯಸ್ಸು ಐದು ವರ್ಷಗಳು: ಸಚಿವ ವಿ ಶಿವನ್‍ಕುಟ್ಟಿ
0
ಮಾರ್ಚ್ 29, 2023