ಸ್ಯಾನ್ ಫ್ರಾನ್ಸಿಸ್ಕೊ: ಇಂಟೆಲ್ ಕಾರ್ಪೊರೇಶನ್ ಸಂಸ್ಥೆಯ ಸಹಸಂಸ್ಥಾಪಕ, ಸೆಮಿಕಂಡಕ್ಟರ್ ಉದ್ಯಮದ ಪ್ರವರ್ತಕ ಗಾರ್ಡನ್ ಮೂರ್ (94 ವರ್ಷ) ಶುಕ್ರವಾರ ಹವಾಯಿಯಲ್ಲಿರುವ ತಮ್ಮ ಮನೆಯಲ್ಲಿ ನಿಧನರಾಗಿರುವುದಾಗಿ ಇಂಟೆಲ್ ಸಂಸ್ಥೆಯ ಹೇಳಿಕೆ ತಿಳಿಸಿದೆ.
1968ರಲ್ಲಿ ಎಂಟುಮಂದಿ ಸಹತಂತ್ರಜ್ಞರೊಂದಿಗೆ ಇಂಟೆಲ್ ಸಂಸ್ಥೆಯನ್ನು ಮೂರ್ ಪ್ರಾರಂಭಿಸಿದ್ದು ಕ್ರಮೇಣ `ಇಂಟೆಲ್ ಇನ್ಸೈಡ್' ಪ್ರೊಸೆಸರ್ಗಳು ವಿಶ್ವದ 80%ಕ್ಕೂ ಅಧಿಕ ಪರ್ಸನಲ್ ಕಂಪ್ಯೂಟರ್(ಪಿಸಿ)ಗಳಲ್ಲಿ ಜೋಡಣೆಗೊಂಡಿವೆ. 1965ರಲ್ಲಿ ಬರೆದ ಲೇಖನದಲ್ಲಿ `ತಂತ್ರಜ್ಞಾನದಲ್ಲಿ ಸುಧಾರಣೆಗಳಿಂದಾಗಿ, ಕೆಲವು ವರ್ಷಗಳ ಹಿಂದೆ ಇಂಟಿಗ್ರೇಟೆಡ್ ಸಕ್ರ್ಯೂಟ್ಗಳನ್ನು ಆವಿಷ್ಕರಿಸಿದ ಬಳಿಕ ಮೈಕ್ರೋಚಿಪ್ ಗಳಲ್ಲಿನ ಟ್ರಾನ್ಸಿಸ್ಟರ್ ಗಳ ಸಂಖ್ಯೆಯು ಪ್ರತೀ ವರ್ಷ ಸರಿಸುಮಾರು ದ್ವಿಗುಣಗೊಂಡಿದೆ.
ಈ ಪ್ರವೃತ್ತಿ ಮುಂದುವರಿಯಲಿದೆ' ಎಂದು ಸಿದ್ಧಾಂತ ಮಂಡಿಸಿದ್ದರು. ಕಂಪ್ಯೂಟರ್ ಚಿಪ್ ಬಳಸಿ ಏನೆಲ್ಲಾ ಸಾಧಿಸಬಹುದು ಎಂಬ ಅವರ ಸಿದ್ಧಾಂತ `ಮೂರ್ಸ್ ಕಾನೂನು ' ಎಂದೇ ಪ್ರಸಿದ್ಧವಾಗಿದೆ. ತಾನೊಬ್ಬ ಆಕಸ್ಮಿಕ ವಾಣಿಜೋದ್ಯಮಿ ಎಂದು ಅವರು ತನ್ನನ್ನು ಬಣ್ಣಿಸಿಕೊಂಡಿದ್ದರು.