ರಾಷ್ಟ್ರೀಯವಾದಿ ಮಹಿಳಾ ಕಾಂಗ್ರೆಸ್‍ನಿಂದ ಮಹಿಳಾ ದಿನಾಚರಣೆ, ಸನ್ಮಾನ
0
ಮಾರ್ಚ್ 08, 2023
ಕಾಸರಗೋಡು: ಸಮಾಜದಲ್ಲಿನ ಒಳಿತು ಕೆಡುಕುಗಳನ್ನು ಅರಿತುಕೊಂಡು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಲು ಮಹಿಳೆಯರು ಮುಂದಾಗಬೇಕು ಎಂದು ರಾಷ್ಟ್ರೀಯವಾದಿ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಅನಿತಾ ಕುನ್ನತ್ ತಿಳಿಸಿದ್ದಾರೆ. ಎನ್‍ಸಿಪಿ ಜಿಲ್ಲಾ ಸಮಿತಿ ಸಭಾಂಗಣದಲ್ಲಿ ನ್ಯಾಶನಲಿಸ್ಟ್ ಮಹಿಳಾ ಕಾಂಗ್ರೆಸ್ ಆಯೋಜಿಸಿದ್ದ ರಾಜ್ಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ನಾವು ಇಲ್ಲಿದ್ದೇವೆ ಎಂಬುದನ್ನು ನಾವು ಮನಗಾಣಬೇಕು. ಆದರ್ಶಪ್ರಾಯವಾದ ಕೆಲಸಗಳಲ್ಲಿ ತೊಡಗಿಸಿಕೊಂಡಾಗ ಮಹಿಳೆಯರು ಸಮಾಜದಿಂದ ಗುರುತಿಸಲ್ಪಡುತ್ತಾರೆ ಎಂದು ತಿಳಿಸಿದರು. ಈ ಸಂದರ್ಭ ಸಮಾಜ ಸೇವಕಿ ಹಾಗೂ ಎಂಡೋಸಲ್ಫಾನ್ ಸಂತ್ರಸ್ತರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಮುನಿಸಾ ಅಂಬಲತ್ತರ ಅವರನ್ನು ರಾಜ್ಯಾಧ್ಯಕ್ಷೆ ಅನಿತಾ ಕುನ್ನತ್ ಸನ್ಮಾನಿಸಿದರು. ಜಿಲ್ಲಾಧ್ಯಕ್ಷೆ ಖದೀಜಾ ಮೊಗ್ರಾಲ್ ಅಧ್ಯಕ್ಷತೆ ವಹಿಸಿದ್ದರು. ಎನ್ ಸಿಪಿ ಜಿಲ್ಲಾಧ್ಯಕ್ಷ ಕರೀಂ ಚಂದೇರ, ರಾಜ್ಯ ಕಾರ್ಯದರ್ಶಿ ಬಾಲನ್ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಮಂಜು ಚೆಂಬ್ರಕಾನಂ ಸ್ವಾಗತಿಸಿದರು.
Tags