ನವದೆಹಲಿ: ಆದಾಯ ತೆರಿಗೆ ಇಲಾಖೆ 2014-15 ರಿಂದ 2021-22ರ ಎಂಟು ವರ್ಷದ ಅವಧಿಯಲ್ಲಿ ವಿವಿಧ ಕಡೆ ನಡೆಸಿದ 5931 ಶೋಧ ಕಾರ್ಯಾಚರಣೆಯಲ್ಲಿ 8800 ಕೋಟಿ ರೂಪಾಯಿ ವಶಪಡಿಸಿಕೊಂಡಿದೆ ಎಂದು ಸರ್ಕಾರ ಲೋಕಸಭೆಗೆ ತಿಳಿಸಿದೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಕಪ್ಪು ಹಣ ಕಾದೆಯಡಿ 13500 ಕೋಟಿ ರೂಪಾಯಿ ತೆರಿಗೆ ಬೇಡಿಕೆಗೆ ನೋಟಿಸ್ ನೀಡಲಾಗಿದೆ.
2015ರಲ್ಲಿ ಈ ಕಾನೂನು ಜಾರಿಎ ಬಂದ ಬಳಿಕ ಸುಮಾರು 350 ಪ್ರಕರಣಗಳಲ್ಲಿ ಡಿಮ್ಯಾಂಡ್ ನೋಟಿಸ್ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
2015ರ ಸೆಪ್ಟೆಂಬರ್ 30ರಂದು ಕೊನೆಗೊಂಡ ಒಂದು ಬಾರಿಯ ಮೂರು ತಿಂಗಳ ಅನುಸರಣೆ ಗವಾಕ್ಷಿಯಡಿ ಸುಮಾರು 4,164 ಕೋಟಿ ರೂಪಾಯಿ ಮೌಲ್ಯದ ಅಘೋಷಿತ ವಿದೇಶಿ ಆಸ್ತಿಗಳನ್ನು 648 ಪ್ರಕರಣಗಳಲ್ಲಿ ಬಹಿರಂಗಪಡಿಸಲಾಗಿದೆ. ಇದರಿಂದ ಬಂದ ದಂಡ ಹಾಗೂ ತೆರಿಗೆ 2467 ಕೋಟಿ ರೂಪಾಯಿ ಎಂದು ವಿವರಿಸಿದರು.