ಸಾಮಾನ್ಯವಾಗಿ ಬೇಸಿಗೆಯಲ್ಲಿ ದಣಿದು ಮನೆಗೆ ಬಂದವರಿಗೆ ಒಂದು ಲೋಟ ನೀರು ಜೊತೆಗೆ ಒಂದು ತುಂಡು ಬೆಲ್ಲ ನೀಡುತ್ತಾರೆ. ಒಂದು ಲೋಟ ನೀರು ಹಾಗೂ ಆ ಬೆಲ್ಲದ ತುಂಡು ತಿಂದ ತಕ್ಷಣ ತುಂಬಾನೇ ರಿಲ್ಯಾಕ್ಸ್ ಅನಿಸುವುದು, ಆಯಾಸವೆಲ್ಲಾ ದೂರಾಗುವುದು ಅಲ್ವಾ?
ನೀವು ಇದುವರೆಗೆ ನೀರು ಹಾಗೂ ಬೆಲ್ಲ ಸೇವಿಸಿಲ್ಲ ಎಂದಾದರೆ ಬಿಸಿಲಿನಲ್ಲಿ ಓಡಾಡಿ ಬಂದಾಗ ಒಂದು ಲೋಟ ನೀರು ಜೊತೆಗೆ ಚಿಕ್ ತುಂಡು ಬೆಲ್ಲ ತಿಂದು ಸುಸ್ತು ಪಟ್ ಅಂತ ಮಾಯಾಗುವುದು.
ನೀವು ಬೇಸಿಗೆಯಲ್ಲಿ ಬೆಲ್ಲ ತಿನ್ನುವುದರಿಂದ ಈ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು ನೋಡಿ:
ಮಲಬದ್ಧತೆ ತಡೆಗಟ್ಟುತ್ತದೆ: ಬೇಸಿಗೆಯಲ್ಲಿ ಕೆಲವರಿಗೆ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಮಲಬದ್ಧತೆ ಸಮಸ್ಯೆ ಉಂಟಾಗುವುದು, ಬೆಲ್ಲ ಮಲಬದ್ಧತೆ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ.
ದೇಹದಲ್ಲಿರುವ ಕಶ್ಮಲವನ್ನು ಹೊರಹಾಕುತ್ತದೆ
ರಕ್ತವನ್ನು ಶುದ್ಧೀಕರಿಸುತ್ತದೆ
ನೀವು ಬೆಲ್ಲವನ್ನು ದಿನಾ ಸ್ವಲ್ಪ ತಿನ್ನುವುದರಿಂದ ರಕ್ತವನ್ನು ಶುದ್ಧೀಕರಿಸಲು ಸಹಕಾರಿ. ಇದರಿಂದ ಅನೇಕ ಬಗೆಯ ಕಾಯಿಲೆ ತಡೆಗಟ್ಟಬಹುದು.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಬೆಲ್ಲದಲ್ಲಿ ಸತು, ಸೆಲೆನಿಯಮ್ ಇರುವುದರಿಂದ ದೇಹದಲ್ಲಿ ಕೆಂಪು ರಕ್ತಕಣಗಳು ಹೆಚ್ಚಾಗುವುದರಿಂದರಕ್ತಹೀನತೆ ತಡೆಗಟ್ಟಲು ಸಹಕಾರಿ.
ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ
ಬೆಲ್ಲದಲ್ಲಿ ಪೊಟಾಷ್ಯಿಯಂ, ಸೋಡಿಯಂ ಇರುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾರಿ.
ನೀವು ಬೇಸಿಗೆಯಲ್ಲಿ ಬೆಲ್ಲದಿಂದ ಇವುಗಳನ್ನು ಮಾಡಿ ಕುಡಿದರೆ ತುಂಬಾ ಒಳ್ಳೆಯದು
ದೊಡ್ಡ
ಲೋಟ ನೀರಿಗೆ ಚಿಕ್ಕ ತುಂಡು ಬೆಲ್ಲ ಹಾಕಿ ಕುದಿಸಿ, ಬೆಲ್ಲ ಕರಗಿದಾಗ ನೀರನ್ನು ಸೋಸಿ
ತಣಿಯಲು ಬಿಡಿ. ನೀರು ತಣ್ಣಗಾದ ಮೇಲೆ ಅದಕ್ಕೆ ನಿಂಬೆರಸ ಸೇರಿಸಿ ಕುಡಿಯಿರಿ.
ಮನೆಯಲ್ಲಿ ಈ ನೀರನ್ನು ಮಾಡಿಟ್ಟರೆ ಬಿಸಿಲಿನಲ್ಲಿ ದಣಿದು ಬಂದಾಗ ಈ ನೀರು ಕುಡಿದರೆ ಆಯಾಸ ದೂರಾಗುವುದು.
ಬೆಲ್ಲವನ್ನು ಮಧುಮೇಹಿಗಳು ಬಳಸಬಹುದೇ?
ಬೆಲ್ಲದಲ್ಲೂ ಗ್ಲೈಸೆಮಿಕ್ ಇಂಡೆಕ್ಸ್ ಅಧಿಕವಿರುವುದರಿಂದ ಬೆಲ್ಲ ತಿಂದಾಗ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದು, ಆದರೆ ಸಕ್ಕರೆಗೆ ಹೋಲಿಕೆ ಮಾಡಿದರೆ ಬೆಲ್ಲ ಹಾನಿಕಾರವಲ್ಲ. ಬೆಲ್ಲದಿಂದ ಮಾಡಿದ ಪದಾರ್ಥಗಳನ್ನು ಸೇವಿಸಿ.