ಕಾಸರಗೋಡು: ರಾಜ್ಯ ಮಟ್ಟದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಸಕಲ ಆಧುನಿಕ ಸೌಲಭ್ಯಗಳೊಂದಿಗೆ ವೈಜ್ಞಾನಿಕ ಮೇಕೆ ಸಾಕಾಣಿಕೆ ಕೇಂದ್ರವನ್ನು ಆರಂಭಿಸಲು ಬೇಡಡ್ಕ ಪಂಚಾಯತಿ ವ್ಯಾಪ್ತಿಯ ಕೊಳತ್ತೂರಿನಲ್ಲಿ ಕಂದಾಯ ಇಲಾಖೆಯಿಂದ 2016-17ನೇ ಸಾಲಿನಲ್ಲಿ 22.74 ಎಕರೆ ಜಮೀನು ಮಂಜೂರುಗೊಳಿಸಲಾಗಿತ್ತು. ನಂತರ ಸುತ್ತುಗೋಡೆ ಮತ್ತು ಕಚೇರಿ ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ.
ಮೇಕೆ ಸಾಕಣೆ ನಿರ್ಮಾಣ ಪ್ರಗತಿಯನ್ನು ರಾಜ್ಯ ಪಶುಸಂಗೋಪನಾ ಸಚಿವೆ ಜೆ.ಚಿಂಚುರಾಣಿ ಸಚಿವರ ಚೇಂಬರ್‍ನಲ್ಲಿ ಕರೆದಿದ್ದ ಉನ್ನತ ಮಟ್ಟದ ಸಭೆಯು ನಿರ್ಮಾಣ ಪ್ರಗತಿಯನ್ನು ಪರಿಶೀಲಿಸಿ ಸಮಯಕ್ಕೆ ಸರಿಯಾಗಿ ಜಮೀನಿನ ಕೆಲಸವನ್ನು ಪೂರ್ಣಗೊಳಿಸಲು ಮತ್ತು ಮೊದಲ ವಾರದಲ್ಲಿ ಕೃಷಿ ಕಾರ್ಯವನ್ನು ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. ಸೆಪ್ಟೆಂಬರ್ ಮೊದಲ ವಾರದಲ್ಲಿ ಸಾಕಾಣೆ ಕೇಂದ್ರದ ಕಾರ್ಯನಿರ್ವಹಣಾ ಆರಂಭಕ್ಕೆ ಬೇಕಾದ ಸಿದ್ದತೆ ನಡೆಸಲು ತೀರ್ಮಾನಿಸಲಾಯಿತು.
ಯೋಜನೆಯು ಆರಂಭದಲ್ಲಿ 200 ಮೇಕೆಗಳು ಮತ್ತು ನಂತರ 1000 ಮೇಕೆಗಳ ಗುರಿಯನ್ನು ತಲುಪಲು ಯೋಜಿಸಲಾಗಿದೆ. ಪ್ರವಾಸೋದ್ಯಮ ಸಾಮಥ್ರ್ಯವಿರುವ 22 ಎಕರೆ ಪ್ರದೇಶದಲ್ಲಿ ನೈಸರ್ಗಿಕ ರೀತಿಯಲ್ಲಿ ಮೇಕೆಗಳನ್ನು ಸಾಕಲು ಹಾಗೂ ಭವಿಷ್ಯದಲ್ಲಿ ಫಾರ್ಮ್ ಅನ್ನು ಪ್ರವಾಸೋದ್ಯಮವಾಗಿ ಪರಿವರ್ತಿಸಲು ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಸಿಚ್.ಕುಂಞಂಬು ಮಾಹಿತಿ ನೀಡಿದರು.
ಕಾಸರಗೋಡಲ್ಲಿ ವೈಜ್ಞಾನಿಕ ಆಡು ಸಾಕಾಣೆ ಕೇಂದ್ರ: ಪಶುಸಂಗೋಪನಾ ಇಲಾಖೆ ಸಚಿವೆ ಜೆ. ಚಿಂಚುರಾಣಿ
0
ಮಾರ್ಚ್ 21, 2023