HEALTH TIPS

ಕಡಿಮೆ ವೆಚ್ಚದಲ್ಲಿ ಭಾಷೆಗಳನ್ನು ಕಲಿಯಲು ಅವಕಾಶ: ಕೇರಳದಲ್ಲಿ ಐದು ವಿದೇಶಿ ಭಾಷೆಗಳನ್ನು ಕಲಿಯಲು ಈಗಲೇ ಅರ್ಜಿ ಸಲ್ಲಿಸಿ


                  ತಿರುವನಂತಪುರಂ: ಎಎಸ್‍ಎಪಿ ಕೇರಳವು ಕಡಿಮೆ ವೆಚ್ಚದಲ್ಲಿ ಇಂಗ್ಲಿಷ್ ಜೊತೆಗೆ ಫ್ರೆಂಚ್, ಜರ್ಮನ್, ಸ್ಪ್ಯಾನಿಷ್ ಮತ್ತು ಜಪಾನೀಸ್ ಕಲಿಯಲು ಅವಕಾಶವನ್ನು ನೀಡುತ್ತದೆ. ಕಮ್ಯುನಿಕೇಟಿವ್ ಇಂಗ್ಲಿಷ್  ಟ್ರೈನರ್, ಜರ್ಮನ್, ಸ್ಪ್ಯಾನಿಷ್, ಫ್ರೆಂಚ್ ಮತ್ತು ಜಪಾನೀಸ್ ಕೋರ್ಸ್‍ಗಳಿಗೆ ಎಎಸ್‍ಎಪಿ ಕೇರಳದಲ್ಲಿ ಪ್ರವೇಶ ಪ್ರಾರಂಭವಾಗಿದೆ.
          ವಿದೇಶಿ ಉದ್ಯೋಗಾವಕಾಶಗಳು ಮತ್ತು ಕಲಿಕೆಯ ಸೌಲಭ್ಯಗಳು ಸಕ್ರಿಯವಾಗುವುದರೊಂದಿಗೆ, ಈ ಭಾಷೆಗಳನ್ನು ಕಲಿಯುವುದು ಕೇರಳದಲ್ಲಿ ಜನಪ್ರಿಯವಾಗಿದೆ. ಈ ಭಾಷೆಗಳನ್ನು ಕಲಿಯಲು ಖಾಸಗಿ ಸಂಸ್ಥೆಗಳು ಭಾರಿ ಶುಲ್ಕವನ್ನು ವಿಧಿಸುತ್ತವೆ. ಕಡಿಮೆ ಶುಲ್ಕದಲ್ಲಿ ಉತ್ತಮ ಸೌಲಭ್ಯಗಳೊಂದಿಗೆ ಕೇರಳದಲ್ಲಿ ಎಎಸ್ಎಪಿ ವಿದೇಶಿ ಭಾμÉಗಳನ್ನು ಕಲಿಸುವ ಅವಕಾಶ ಒದಗಿಸುತ್ತದೆ. ಮಾರ್ಚ್ 31ರವರೆಗೆ ಅರ್ಜಿ ಸಲ್ಲಿಸಬಹುದು. ಕೆನರಾ ಬ್ಯಾಂಕ್ ಮತ್ತು ಕೇರಳ ಬ್ಯಾಂಕ್‍ನ ಕೌಶಲ್ಯ ಸಾಲ ಸೌಲಭ್ಯವು ಎಲ್ಲಾ ಕೋರ್ಸ್‍ಗಳಿಗೆ ಲಭ್ಯವಿದೆ.
            ಹೆಚ್ಚಿನ ಮಾಹಿತಿಗಾಗಿ: 9495 999 623/9495 999709 ಕರೆಮಾಡಬಹುದು.
              ಕಮ್ಯುನಿಕೇಟಿವ್ ಇಂಗ್ಲಿμï ಟ್ರೈನರ್ ಕೋರ್ಸ್ ವಿದ್ಯಾರ್ಥಿಗಳಿಗೆ ತಮ್ಮ ಭಾಷೆ ಮತ್ತು ಸಂವಹನ ಕೌಶಲ್ಯಗಳನ್ನು ಸುಧಾರಿಸಲು ಅನುವು ಮಾಡಿಕೊಡುತ್ತದೆ. ಈ ಕೋರ್ಸ್ ವಿದ್ಯಾರ್ಥಿಗಳ ಇಂಗ್ಲಿಷ್ ಭಾಷಾ ಕೌಶಲ್ಯವನ್ನು ಸುಧಾರಿಸುತ್ತದೆ ಮತ್ತು ಭಾಷಾ ತರಬೇತುದಾರರಾಗಲು ಅನುವು ಮಾಡಿಕೊಡುತ್ತದೆ. ಪದವಿ ಅರ್ಹತೆಯಾಗಿದೆ. ಇದು ಎನ್.ಸಿ.ವಿ ಇಟಿ ಹಂತದ ಐದು ಪ್ರಮಾಣೀಕರಣ ಕೋರ್ಸ್ ಆಗಿದೆ. ಕೋರ್ಸ್ ಅವಧಿ: 400 ಗಂಟೆಗಳು (6 ತಿಂಗಳುಗಳು), 171 ಗಂಟೆಗಳ ಸಿದ್ಧಾಂತ ತರಗತಿಗಳು, 109 ಗಂಟೆಗಳ ಸ್ವಯಂ-ಅಧ್ಯಯನ ಮಾಡ್ಯೂಲ್ ಮತ್ತು 120 ಗಂಟೆಗಳ ಇಂಟರ್ನ್‍ಶಿಪ್ ಇರಲಿದೆ. ಎಎಸ್ ಎಪಿ ಕೇರಳದ ಅಡಿಯಲ್ಲಿ 16 ಸಮುದಾಯ ಕೌಶಲ್ಯ ಉದ್ಯಾನವನಗಳಲ್ಲಿ ಈ ಕೋರ್ಸ್ ಲಭ್ಯವಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕಾಲೇಜುಗಳಲ್ಲೂ ಕೋರ್ಸ್ ಆಯೋಜಿಸಲಾಗುವುದು.
          ಬ್ಯಾಚ್‍ಗಳು: ನಿಯಮಿತ/ ವಾರಾಂತ್ಯದ ಬ್ಯಾಚ್‍ಗಳ ಶುಲ್ಕ: 14750

             ಜರ್ಮನ್ ಭಾಷಾ ಕೋರ್ಸ್ ವಿದ್ಯಾರ್ಥಿಗಳಿಗೆ ದೈನಂದಿನ ಬಳಕೆಗೆ ಸಹಾಯಕವಾಗುವ ರೀತಿಯಲ್ಲಿ ಜರ್ಮನ್ ಮಾತನಾಡಲು ತರಬೇತಿ ನೀಡುತ್ತದೆ. ಅಸಾಪ್ ಈ ಕೋರ್ಸ್ ನಡೆಸುವಲ್ಲಿ ಗೊಥೆ ಸೆಂಟ್ರಮ್‍ನಿಂದ ಬೆಂಬಲಿತವಾಗಿದೆ. ಅವಧಿ: 90 ಗಂಟೆಗಳ ಆನ್‍ಲೈನ್ ಕೋರ್ಸ್‍ಗೆ ರೂ.18880 ಶುಲ್ಕ.
          ಫ್ರೆಂಚ್ ಭಾಷಾ ಕೋರ್ಸ್ ಅನ್ನು ಅಲಿಯೋನ್ಸ್ ಫ್ರಾಂಚೈಸ್ ಸಹಯೋಗದೊಂದಿಗೆ ಕಲಿಸಲಾಗುತ್ತದೆ. ವಿಷಯ ಬರಹಗಾರ, ಭಾಷಾ ತರಬೇತುದಾರ, ಅನುವಾದ, ಪ್ರೂಫ್ ರೀಡಿಂಗ್ ಇತ್ಯಾದಿಗಳಲ್ಲಿ ಉದ್ಯೋಗಾವಕಾಶಗಳು. ಕೋರ್ಸ್ ಅವಧಿ: 120 ಗಂಟೆಗಳ ಆನ್‍ಲೈನ್ ಕೋರ್ಸ್‍ಗೆ ಶುಲ್ಕ 9,499 ರೂ.
           ಸ್ಪ್ಯಾನಿಷ್ ಕೋರ್ಸ್‍ನ ಅವಧಿ: 120 ಗಂಟೆಗಳು. ಆನ್‍ಲೈನ್ ಕೋರ್ಸ್‍ಗೆ ಶುಲ್ಕ 28,320 ರೂ. ಜಪಾನೀಸ್ ಭಾಷಾ ಕೋರ್ಸ್ 15 ವರ್ಷಕ್ಕಿಂತ ಮೇಲ್ಪಟ್ಟ ಯಾರಿಗಾದರೂ ತೆರೆದಿರುತ್ತದೆ. ಈ ಕೋರ್ಸ್‍ನ ಭಾಗವಾಗಿ ಜಪಾನೀಸ್ ಭಾಷೆ ಮತ್ತು ವ್ಯಾಕರಣದ ಮೂಲಗಳನ್ನು ಅಧ್ಯಯನ ಮಾಡಬಹುದು. ಆನ್‍ಲೈನ್ ಕೋರ್ಸ್‍ಗೆ ಶುಲ್ಕ 10,915 ರೂ.ಇರಲಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries