ಮುಳ್ಳೇರಿಯ: ಬೆಳ್ಳೂರು ಕಲ್ಲೇರಿಮೂಲೆ ಶ್ರೀ ವಿಷ್ಣುಮೂರ್ತಿ ಕ್ಷೇತ್ರದ ವಾರ್ಷಿಕೋತ್ಸವ ಹಾಗೂ ಸ್ಥಳೀಯ ಶ್ರೀವಿಷ್ಣುಮೂರ್ತಿ ಕ್ಲಬ್ ನ 58ನೇ ವಾರ್ಷಿಕೋತ್ಸವ ಶನಿವಾರ ನಡೆಯಿತು.
ಈ ಸಂದರ್ಭ ಶ್ರೀ ಕ್ಷೇತ್ರದಲ್ಲಿ ಪರಿಸರದ ಹಿರಿಯ ಕೃಷಿಕ ವೊಲಸೆರಿ ಕೇಶವ ಕಡಂಬಳಿತ್ತಾಯರವರುರವರು ತುಳುಲಿಪಿ ನಾಮಫಲಕವನ್ನು ಉದ್ಘಾಟನೆಗೈದರು. ಮಾಲೆಂಕಿ ಶ್ರೀಪತಿ ಕಡಂಬಳಿತ್ತಾಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಬಾರ್ಕೂರಿನಿಂದ ನಿಲೇಶ್ವರದವರಿಗೂ ಚಾಚಿಕೊಂಡಿದ್ದ ತುಳುನಾಡಿನ ಸಂಸ್ಕøತಿ, ಆಚಾರ, ವಿಚಾರ ಹಾಗೂ ತುಳು ಭಾಷೆ, ಲಿಪಿ ಇವುಗಳನ್ನು ಉಳಿಸಿ ಬೆಳೆಸುವಲ್ಲಿ ಜೈ ತುಳುನಾಡು ಸಂಘಟನೆ ಕೈಗೆತ್ತಿಕೊಂಡಿರುವ ಮಹತ್ಕಾರ್ಯವನ್ನು ಶ್ಲಾಘಿಸಿದರು.
ಸುಬ್ರಹ್ಮಣ್ಯ ಕಡಂಬಳಿತ್ತಾಯ ಮಾತನಾಡಿ, ಸಂಘಟನೆಗೆ ತಾವು ಹಾಗೂ ಕ್ಷೇತ್ರ ಪದಾಧಿಕಾರಿಗಳು ಎಲ್ಲಾ ವಿಧದಲ್ಲೂ ಪರಿಪೂರ್ಣ ಬೆಂಬಲವನ್ನು ಘೋಷಿಸಿದರು. ಜೈ ತುಳುನಾಡು ಸಂಘಟನೆಯ ಜೊತೆ ಕಾರ್ಯದರ್ಶಿ, ಜಗನ್ನಾಥ್ ಕುಲಾಲ್ ಸಂಘಟನೆಯ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಕ್ಷೇತ್ರ ಆಡಳಿತ ಅಧಿಕಾರಿ ವೊಲಸೆರಿ ಸೂರ್ಯನಾರಾಯಣ ಕಡಂಬಳಿತ್ತಾಯ, ಜೈ ತುಳುನಾಡ್ ಸಂಘಟನೆಯ ಸುಶಾಂತ್ ಕುಲಾಲ್, ಮಾಸ್ಟರ್ ಸನ್ವಿತ್ ಕುಲಾಲ್, ಬೇಬಿ ಸನ್ನಿಧಿ ಕುಲಾಲ್ ಇತರರು ಉಪಸ್ಥಿತರಿದ್ದರು. ಕವಿ, ಸಾಹಿತಿ ಪುಂಡೂರು ವಿಜಯರಾಜ್ ಪುಣಿಂಚಿತ್ತಾಯ ಸ್ವಾಗತಿಸಿ, ಪೊಲಸಿರಿ ಸುಬ್ರಹ್ಮಣ್ಯ ಕಡಂಬಳಿತ್ತಾಯ ವಂದಿಸಿದರು. ಜಗನ್ನಾಥ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಜೈ ತುಳುನಾಡು ಸಂಘಟನೆಯ ವತಿಯಿಂದ ಜಗನ್ನಾಥ್ ಕುಲಾಲ್ ಇವರು ವೊಲಸಿರಿ ಸೂರ್ಯನಾರಾಯಣ ಕಡಂಬಳಿತ್ತಾಯ ಇವರಿಗೆ ನೆನಪಿನ ಕಾಣಿಕೆ ಇತ್ತು ಗೌರವಿಸಿದರು.