HEALTH TIPS

ಬೆಳಗ್ಗೆ ಎದ್ದೇಳುವಾಗ ಬಲಬದಿಯಿಂದಲೇ ಏಳಬೇಕು ಯಾಕೆ?

 ರಾತ್ರಿ ಮಲಗೋದು ಎಷ್ಟು ಮುಖ್ಯವೋ ಬೆಳಗ್ಗಿನ ಜಾವ ಏಳೋದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಅದ್ರಲ್ಲೂ ಕೂಡ ಹಿರಿಯರು ನಮಗೆ ಬಲ ಬದಿಯಿಂದಲೇ ಏಳಬೇಕು ಅನ್ನೋದನ್ನ ಹೇಳಿ ಕೊಟ್ಟಿರುತ್ತಾರೆ. ಆದರೆ ಅದರ ಹಿಂದಿನ ಕಾರಣ ಏನು ಅನ್ನೋದು ಇಂದಿಗೂ ಅನೇಕ ಜನರಿಗೆ ಗೊತ್ತಿಲ್ಲ.

ನಾವು ರಾತ್ರಿ ಮಲಗುವಾಗಲು ಸರಿಯಾದ ಕ್ರಮವನ್ನೇ ಅನುಸರಿಸಬೇಕು. ಇಲ್ಲವಾದರೆ ಕುತ್ತಿಗೆ, ಬೆನ್ನು ಹೀಗೆ ದೇಹದ ಎಲ್ಲಾ ಭಾಗದಲ್ಲೂ ನೋವು ಕಾಣಿಸಿಕೊಳ್ಳುತ್ತದೆ. ಅದೇ ರೀತಿ ಬೆಳಗ್ಗಿನ ಜಾವ ಏಳೋದು ಕೂಡ ನಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರಮುಖ ಪಾತ್ರ ವಹಿಸುತ್ತದೆ. ಅಷ್ಟಕ್ಕು ಯಾಕೆ ನಾವು ಬಲಬದಿಯಿಂದಲೇ ಏಳಬೇಕು? ಬಲಭಾಗದಿಂದ ಏಳದಿದ್ದರೆ ಯಾವ ರೀತಿ ತೊಂದರೆ ಆಗುತ್ತದೆ ಅನ್ನೋದನ್ನ ಹೇಳ್ತೀವಿ.

ರಾತ್ರಿ ತಡವಾಗಿ ಅಥವಾ ಮಧ್ಯರಾತ್ರಿ ಮಲಗೋದು ಒಳ್ಳೆಯ ಅಭ್ಯಾಸವಲ್ಲ. ಇದರಿಂದಾಗಿ ಬೆಳಗ್ಗೆ ಎದ್ದಾಗ ವಿಪರೀತ ತಲೆನೋವು ಕಾಣಿಸಿಕೊಳ್ಳುತ್ತದೆ. ಹೀಗಾಗಿ ರಾತ್ರಿಯ ನಿದ್ದೆ ಚೆನ್ನಾಗಿರಬೇಕು. ಅಷ್ಟೇ ಅಲ್ಲ ನಮಗಿಷ್ಟ ಬಂದ ಹಾಗೆ ಅಶಿಸ್ತಿನಿಂದ ಮಲಗಿದಾಗಲೂ ಕೂಡ ಮೈ ಕೈ ನೋವು ಕಾಣಿಸಿಕೊಳ್ಳುತ್ತದೆ. ಬೆಳಗ್ಗೆ ಏಳುವಾಗಲೂ ಮುಂಜಾಗೃತೆಯಿಂದಿರಬೇಕು.

ಬಲಭಾಗದಿಂದ ಎದ್ದರೆ ತುಂಬಾನೇ ಒಳ್ಳೆಯದು

ಅತೀ ಹೆಚ್ಚಿನ ಜನ ಬೆಳಗ್ಗೆ ಬಲಬದಿಯಿಂದಾನೇ ಏಳುತ್ತಾರೆ. ನಿಜ ಹೇಳಬೇಕೆಂದರೆ ಇದು ಒಳ್ಳೆಯ ಅಭ್ಯಾಸ. ಆಯುರ್ವೇದ ಹಾಗೂ ಆಧುನಿಕ ವಿಜ್ಞಾನದಲ್ಲೂ ಕೂಡ ಈ ಅಭ್ಯಾಸ ಒಳ್ಳೆಯದೆಂದು ಸಾಭೀತಾಗಿದೆ. ಇದು ನಿಮ್ಮನ್ನು ಅನೇಕ ರೀತಿಯ ಆರೋಗ್ಯ ಸಮಸ್ಯೆ ಹಾಗೂ ಅಪಾಯಗಳಿಂದ ಪಾರು ಮಾಡಬಲ್ಲದು. ನಮ್ಮ ಮೆದುಳಿನ ಬಲಭಾಗವು ಸೃಜನಶೀಲ ಚಟುವಟಿಕೆಯನ್ನು ನಿಯಂತ್ರಿಸುತ್ತದೆ. ಹಾಗೂ ನಮ್ಮ ಮೆದುಳಿನ ಎಡಭಾಗವು ತಾರ್ಕಿಕ ಮೌಖಿಕ ಚಟುವಟಿಕೆಯನ್ನು ನಿಯಂತ್ರಿಸುತ್ತದೆ. ಬೆಳಗ್ಗೆ ಬಲ ಬದಿಯಿಂದ ಏಳುವುದರಿಂದ ನಿಮ್ಮ ಅಂದಿನ ದಿನ ಶಾಂತಿಯುತವಾಗಿಯೂ ಹಾಗೂ ಒತ್ತಡವಿಲ್ಲದೇ ಕಳೆಯಬಹುದು.

ಕುಡಿದ ಮತ್ತಿನಲ್ಲಿ ಎಡಬದಿಯಿಂದ ಎದ್ದರೆ ಖಂಡಿತ ಅಪಾಯ

ಕಂಠಪೂರ್ತಿ ಕುಡಿದ ವ್ಯಕ್ತಿಯೊಬ್ಬ ಮಾರನೇ ದಿನ ಎದ್ದಾಗ ಹ್ಯಾಗ್‌ಒವರ್‌ ಹಾಗೇ ಇರುತ್ತದೆ. ಕೆಲವೊಂದು ಸಾರಿ ಅವನಿಗೆ ಹುಷಾರು ತಪ್ಪಲೂಬಹುದು. ಇನ್ನೂ ಕೆಲವರಿಗೆ ಸಿಕ್ಕಾಪಟ್ಟೆ ಹಸಿವು ಕೂಡ ಆಗುತ್ತದೆ. ಒಂದು ವೇಳೆ ಇದೇ ಹ್ಯಾಗ್‌ ಒವರ್‌ನಲ್ಲಿ ನೀವು ಬೆಳಗ್ಗೆ ಎಡಬದಿಯಿಂದ ಎದ್ದರೆ ಬಿದ್ದು ಗಾಯಗೊಳ್ಳುವ ಸಾಧ್ಯತೆ ಹೆಚ್ಚು. ಕುಡಿಯದಿದ್ದವರು ಕೂಡ ಎಡಬದಿಯಿಂದ ಎದ್ದಾಗ ತಲೆ ಸುತ್ತುವುದು, ಏಕಾಏಕಿ ಕೆಳಗೆ ಬೀಳುವುದು ಇಂತಹ ಅನುಭವ ಆಗುತ್ತದೆ. ಹೀಗಾಗಿ ಏಳುವಾಗ ಜಾಗರೂಕತೆ ತುಂಬಾನೇ ಒಳ್ಳೆಯದು.


ಇಂಜೆಕ್ಷನ್‌ ಪ್ರಭಾವ

ಹೆಚ್ಚಿನವರು ಬಲಗೈಯವರಾಗಿರೋದ್ರಿಂದ ಇನ್ಸುಲಿನ್‌, ಚುಚ್ಚುಮದ್ದು ನೀಡುವ ಸಂದರ್ಭದಲ್ಲಿ ಎಡಗೈಗೆ ಚುಚ್ಚಿಸಿಕೊಳ್ಳುತ್ತಾರೆ. ಎಡಗೈಯಲ್ಲಿನ ಸ್ನಾಯುಗಳು ಮತ್ತು ನರಗಳು ನಿರಂತರ ಔಷಧ ಚುಚ್ಚುಮದ್ದಿನಿಂದ ಕ್ಷೀಣಗೊಂಡಿರುತ್ತದೆ. ಹಾಗೂ ಅದಕ್ಕೆ ಬಲಗೈಗೆ ಇರುವಷ್ಟು ಶಕ್ತಿ ಇರೋದಿಲ್ಲ. ನೀವು ಒಂದು ವೇಳೆ ಎಡ ಬದಿಯಿಂದ ಏಳುವುದಾದರೆ ನಿಮ್ಮ ದೇಹದ ತೂಕವೆಲ್ಲಾ ಒಂದು ಭಾಗಕ್ಕೆ ಬೀಳುತ್ತದೆ. ನಿಮಗೆ ಏಳಲು ಕೂಡ ಇದರಿಂದ ಕಷ್ಟವಾಗಬಹುದು.

ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದಾಗ

ಹೆಚ್ಚಿನ ಜನರು ಬಲಗೈಯವರಾಗಿರುವುದರಿಂದ ಅವನು/ಅವಳು ಅಸಮರ್ಪಕ ಲೈಂಗಿಕ ಭಂಗಿಗಳನ್ನು ಪ್ರಯೋಗಿಸಲು ಪ್ರಯತ್ನಿಸಿದಾಗ ಗಾಯಗೊಳ್ಳುವ ಸಾಧ್ಯತೆ ಇರುತ್ತದೆ ಎಂದು ವೈಜ್ಞಾನಿಕ ಅಧ್ಯಯನಗಳು ತಿಳಿಸಿದೆ. ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ ನಂತರ ನೀವು ಹಾಸಿಗೆಯ ಎಡಭಾಗದಲ್ಲಿ ಏಳಲು ಪ್ರಯತ್ನಿಸಿದರೆ, ಅದು ಬಲಭಾಗದಲ್ಲಿ ಇನ್ನೂ ಹೆಚ್ಚಿನ ಒತ್ತಡವನ್ನು ಉಂಟುಮಾಡುವ ಸಾಧ್ಯತೆಯಿದೆ.

ಬೆಳಗ್ಗೆ ಬಲಭಾಗದಿಂದ ಏಳುವುದು ಒಳ್ಳೆಯದು ಅನ್ನೋದು ಕೇವಲ ನಂಬಿಕೆ ಮಾತ್ರವಲ್ಲ. ಆರೋಗ್ಯದ ದೃಷ್ಟಿಯಿಂದಲೂ ಕೂಡ ಇದು ತುಂಬಾನೇ ಒಳ್ಳೆಯದು. ಹೀಗಾಗಿ ಸಾಧ್ಯವಾದಷ್ಟು ಬಲ ಬದಿಯಿಂದಲೇ ಏಳಲು ಪ್ರಯತ್ನಿಸಿ.



 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries