ಎಲ್ಲಿಗಾದರು ಹೊರಟಿರುತ್ತೇವೆ ನೋಡಿದರೆ ಕಪ್ಪು ಬೆಕ್ಕು ಅಡ್ಡ ಬರುತ್ತದೆ ನಾವು ಮೂಢನಂಬಿಕೆಯೆಂದು ಹೇಳಿದರೂ ತಕ್ಷಣ ಹೋಗುವುದಿಲ್ಲ ಒಂದೆರಡು ನಿಮಿಷ ತಡೆದು ಮತ್ತೆ ಮುಂದೆ ಸಾಗುತ್ತೇವೆ.
ಬೆಕ್ಕು ನಮ್ಮ ದಾರಿಗೆ ಅಡ್ಡಬಂದರೆ ನಿಜವಾಗಲೂ ಅಪಶಕುನವೇ? ಏಕೆ ಹೀಗೆ ಹೇಳುತ್ತಾರೆ ಇದರ ಹೊಂದಿರುವ ಕಾರಣವೇನಿರಬಹುದು ಎಂದು ನೋಡೋಣ ಬನ್ನಿ:
ಬೆಕ್ಕು ದಾರಿಗೆ ಅಡ್ಡ ಬಂದರೆ...ಈ ಬಗೆಯ ನಂಬಿಕೆ ಭಾರತದಲ್ಲಿ ಮಾತ್ರವೇ?
ಬೆಕ್ಕು ದಾರಿಗೆ ಅಡ್ಡ ಬಂದರೆ ಒಳ್ಳೆಯದಲ್ಲ ಎಂಬ ನಂಬಿಕೆ ಭಾರತೀಯರಲ್ಲಿದೆ. ಆದರೆ ಈ ನಂಬಿಕೆ ನಮ್ಮ ಭಾರತದಲ್ಲಿ ಮಾತ್ರವಲ್ಲ ಇತರ ದೇಶಗಳಲ್ಲಿಯೂ ಇದೆ. ನಾವು ಕಪ್ಪು ಬೆಕ್ಕು ಅಡ್ಡ ಬಂದರೆ ಒಳ್ಳೆಯದಲ್ಲ ಎಂದು ಭಾವಿಸಿದರೆ ಬ್ರಿಟನ್, ಜರ್ಮನಿ , ಐಲ್ಯಾಂಡ್, ಜಪಾನ್ ಈ ದೇಶಗಳಲ್ಲಿಯೂ ಈ ಬಗೆಯ ನಂಬಿಕೆ ಇದೆ. ಆದರೆ ಆ ದೇಶಗಳಲ್ಲಿ ಬೆಕ್ಕು ಅಡ್ಡ ಬಂದರೆ ಒಳ್ಳೆಯದು ಎಂದು ಹೇಳುತ್ತಾರೆ. ನಮ್ಮಲ್ಲಿ ಬೆಕ್ಕು ಅಡ್ಡ ಬಂದರೆ ಅದರಲ್ಲೂ ಕಪ್ಪು ಬೆಕ್ಕು ಅಡ್ಡಬಂದರೆ ಕೆಟ್ಟದ್ದು ಎಂದು ಭಾವಿಸಲಾಗುವುದು.
ಕಪ್ಪು ಬೆಕ್ಕು ಅಡ್ಡ ಬಂದರೆ ಅಪಶಕುನ ಎಂದು ಹೇಳಲು ಕಾರಣವೇನು?
ಕಪ್ಪು ಎಂದರೆ ಶನಿ ದೇವನಿಗೆ ಸಂಬಂಧಿಸಿದ ಬಣ್ಣವಾಗಿದೆ. ಒಂದು ವೇಳೆ ಕಪ್ಪು ಬೆಕ್ಕು
ಅಡ್ಡ ಬಂದರೆ ಶನಿದೇವ ಈಗ ಹೋಗುವುದು ಸೂಕ್ತವಲ್ಲ ಎಂಬ ಸೂಚನೆ ನೀಡಿದ್ದಾನೆ ಎಂದು
ನಂಬಲಾಗಿದೆ.
ಈ ನಂಬಿಕೆಗಳನ್ನು ನಾವು ಕಣ್ಮುಚ್ಚಿ ಪಾಲಿಸುತ್ತಿದ್ದೇವಾ?
ಕೆಲವೊಂದು ನಂಬಿಕೆಗಳು ತರ್ಕಕ್ಕೆ ನಿಲುಕದ್ದು, ಆ ಕಾಲದಲ್ಲಿ ಯಾವುದೋ ಒಂದು ಕಾರಣಕ್ಕೆ
ಅಂತ ನಂಬಿಕೆ ಹುಟ್ಟಿಕೊಂಡಿರುತ್ತದೆ, ಅದರ ಹಿಂದಿನ ಉದ್ದೇಶವೇ ಬೇರೆಯಾಗಿರುತ್ತದೆ ಆದರೆ
ಬರ್ತಾ ಬರ್ತಾ ಅದು ಮೂಢ ನಂಬಿಕೆಯಾಗಿ ಬದಲಾಗಿರುತ್ತದೆ. ಅದರ ಹಿಂದಿನ ಕಾರಣಗಳು
ಗೊತ್ತಿರುವುದಿಲ್ಲ, ಆವಾಗ ಕೆಲವರು ಇದನ್ನು ಪಾಲಿಸುತ್ತಾರೆ, ಇನ್ನು ಕೆಲವರು
ಪಾಲಿಸುವುದಿಲ್ಲ.
ಕಪ್ಪು ಬೆಕ್ಕು ಅಡ್ಡ ಬಂದಾಗ ಹೋಗಬಾರದು ಎನ್ನುವುದಕ್ಕೇ ಈ ಕಾರಣವಿರಬಹುದೇ?
ಹಿಂದೆಯೆಲ್ಲಾ ಜನರು ಎತ್ತಿನ ಗಾಡಿ, ಕುದುರೆಗಾಡಿ ಇವುಗಳ ಮೂಲಕ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುತ್ತಿದ್ದರು. ಹೀಗೆ ಹೋಗುವಾಗ ಕೆಲವೊಮ್ಮೆ ಕತ್ತಲಾಗುತ್ತಿತ್ತು. ಆವಾಗ ಈ ರೀತಿ ಕಪ್ಪು ಬೆಕ್ಕು ಅಡ್ಡ ಬಂದರೆ ಅದರ ಕಣ್ಣುಗಳು ಕತ್ತಲೆಯಲ್ಲಿ ಹೊಳೆಯುವುದರಿಂದ ಎತ್ತು, ಕುದುರೆಗಳು ಭಯಪಡುತ್ತಿದ್ದೆವು, ಆವಾಗ ಗಾಡಿ ಓಡಿಸುವವರು ಒಂದೆರಡು ನಿಮಿಷ ಗಾಡಿ ನಿಲ್ಲಿಸಿ ನಂತರ ಓಡಿಸುತ್ತಿದ್ದರು, ಆದರೆ ಕಾಲ ಬದಲಾದಂತೆ ನಂಬಿಕೆಗಳು ಹಾಗೇ ಉಳಿದುಕೊಂಡು ಅದು ಮೂಢನಂಬಿಕೆಯಾಗಿ ಬದಲಾಗಿರಬಹುದೇ?
ಅಗ್ನಿ ಪುರಾಣ ಏನು ಹೇಳುತ್ತದೆ?
ಬೆಕ್ಕು ಬಲದಿಂದ ಎಡಕ್ಕೆ ಚಲಿಸಿದರೆ ಶುಭ ಸಂಕೇತ ಎಂದು ಭಾವಿಸಲಾಗುವುದು. ಅದರಂತೆ ಒಬ್ಬ
ವ್ಯಕ್ತಿ ಬಳಿಯಿಂದ ಬೆಕ್ಕು ದೂರ ಹೋಗುತ್ತಿರುವುದು ಕಂಡರೂ ಒಳ್ಳೆಯ ಸಂಕೇತ ಎಂದು
ಹೇಳಲಾಗುವುದು.
ನೀವು ಇವುಗಳನ್ನು ನಂಬುವವರೇ?
ಮೂರು ಬಗೆಯ ಜನರಿದ್ದಾರೆ ಕೆಲವರು ನಂಬುತ್ತಾರೆ, ಇನ್ನು ಕೆಲವರು ನಂಬುವುದಿಲ್ಲ, ಇನ್ನು
ಕೆಲವರು ಗೊಂದಲ್ಲಿರುತ್ತಾರೆ ಅವರಿಗೆ ನಂಬಿಕೆ ಇರಲ್ಲ ಆದರೂ ಇಂಥ ನಂಬಿಕೆ ದಿಕ್ಕರಿಸುವ
ಧೈರ್ಯವೂ ಇರಲ್ಲ.
ಅಂಥವರಿಗೆ ಒಂದು ಸಲಹೆಯೆಂದರೆ ಕೆಲವೊಂದು ನಂಬಿಕೆಗಳನ್ನು ಪಾಲಿಸಬೇಕೆ, ಬೇಡ್ವೆ ಎಂಬ
ಗೊಂದಲವಿದ್ದರೆ ಪಾಲಿಸಿ, ಏಕೆಂದರೆ ನೀವು ಪಾಲಸಿದೇ ಹೋದರೂ ತುಂಬಾ ತಳಮಳಗೊಳ್ಳುವಿರಿ,
ಪಾಲಿಸಿದರೆ ನೆಮ್ಮದಿಯಿಂದ ಇರುವಿರಿ, ಆದ್ದರಿಂದ ನೆಮ್ಮದಿ ಮುಖ್ಯ ಅಲ್ವಾ?
ಬೆಕ್ಕು ದಾರಿಗೆ ಅಡ್ಡ ಬಂದರೆ ಏನಾಗುತ್ತದೆ ಎಂಬುವುದರ ಹಿಂದೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ, ಆದ್ದರಿಂದ ಕೆಲವೊಂದು ನಂಬಿಕೆಗಳನ್ನು ಪಾಲಿಸಬೇಕೆ, ಬೇಡ್ವೆ ಎಂಬುವುದು ನಿಮ್ಮ ವಿವೇಚನೆಗೆ ಬಿಟ್ಟದ್ದು.