ಹೈದರಾಬಾದ್: ಸೌದಿ ಅರೇಬಿಯಾದ ದೊರೆ ಮೊಹಮ್ಮದ್ ಅಲ್ ಸೌದ್ ಭಾರತಕ್ಕೆ ಉಡುಗೊರೆಯಾಗಿ ನೀಡಿದ್ದ ಅಬ್ದುಲ್ಲಾ(15) ಹೆಸರಿನ ಗಂಡು ಚೀತಾ ಹೃದಯಾಘಾತದಿಂದ ವಿಧಿವಶವಾಗಿದೆ ಎಂದು ತಿಳಿದು ಬಂದಿದೆ.
ಹೈದರಾಬಾದಿನ ಜವಾಹರ್ಲಾಲ್ ನೆಹರೂ ಮೃಗಾಲಯಕ್ಕೆ ಸೌದಿ ದೊರೆ ಚೀತಾವನ್ನು ಉಡಗೊರೆಯಾಗಿ ನೀಡಿದ್ದರು.ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಬ್ದುಲ್ಲಾ ಹೆಸರಿನ ಚೀತಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದು ವರದಿಯಾಗಿದೆ.
2013ರಲ್ಲಿ ಸೌದಿ ಅರೇಬಿಯಾದ ದೊರೆ ಮೊಹಮ್ಮದ್ ಅಲ್ ಸೌದ್ ಭಾರತಕ್ಕೆ ಭೇಟಿ ನೀಡಿದ ಸಮಯದಲ್ಲಿ ಹಿಬಾ-ಅಬ್ದುಲ್ಲಾ ಎಂಬ ಗಂಡು ಹಾಗೂ ಹೆಣ್ಣು ಚೀತಾವನ್ನು ನೆನಪಾರ್ಥವಾಗಿ ಜವಾಹರ್ಲಾಲ್ ನೆಹರೂ ಮೃಗಾಲಯಕ್ಕೆ ಉಡುಗೊರೆಯಾಗಿ ನೀಡಿದ್ದರು.
ಹಿಬಾ ಹೆಸರಿನ ಹೆಣ್ಣು ಚೀತಾ 2020ರಲ್ಲಿ ಮೃತಪಟ್ಟಿತು.