ಕಾಸರಗೋಡು: ಚೆಂಗೋಟುಕೋಣಂ ಶ್ರೀ ರಾಮದಾಸ ಆಶ್ರಮದ ಆಶ್ರಯದಲ್ಲಿ ಕೊಲ್ಲೂರು ಮುಕಾಂಬಿಕಾ ದೇವಸ್ಥಾನದಿಂದ ಹೊರಟ ಶ್ರೀರಾಮ ನವಮಿ ರಥ ಯಾತ್ರೆಗೆ ಕಾಸರಗೋಡಲ್ಲಿ ನಿನ್ನೆ ಭವ್ಯ ಸ್ವಾಗತ ನೀಡಲಾಯಿತು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಮಠಾಧೀಶ ಶ್ರೀಗುರು ದೇವಾನಂದ ಸ್ವಾಮೀಜಿ ಅವರ ಪೂಜೆಯೊಂದಿಗೆ ಎರಡನೇ ದಿನದ ಯಾತ್ರೆ ಆರಂಭವಾಯಿತು.
ಶ್ರೀರಾಮ ರಥ ದೇಹದ ಸಂಕೇತ. ರಥವನ್ನು ಓಡಿಸುವಾಗ ಅದರದೇ ಆದ ನಿಯಮಗಳಿರುತ್ತವೆ. ನಿಯಮಗಳನ್ನು ಅನುಸರಿಸುವ ಮೂಲಕ ಮಾತ್ರ ನಮ್ಮ ಗಮ್ಯಸ್ಥಾನವನ್ನು ತಲುಪಬಹುದು. ಹಾಗೆಯೇ ದೇಹದ ಪ್ರತಿಯೊಂದು ಅಂಗಕ್ಕೂ ಅದರದೇ ಆದ ಧರ್ಮವಿದೆ. ನಾರಾಯಣನು ಭೂಮಿಯಲ್ಲಿ ಅವತರಿಸಿ ನಮಗೆ ನರನಾಗಿ ಆ ಧರ್ಮಮಾರ್ಗ ತೋರಿಸಿದ್ದಾನೆ. ರಾಮ ಧರ್ಮದ ಸಾಕಾರ ಮೂರ್ತಿ ಎಂದು ಸ್ವಾಮೀಜಿ ಹೇಳಿದರು.
ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ, ಚಿನ್ಮಯ ಆಶ್ರಮ ಕಾಸರಗೋಡು, ನಿತ್ಯಾನಂದ ಆಶ್ರಮ ಕಾಞಂಗಾಡ್ ಮುಂತಾದ ವಿವಿಧೆಡೆ ಸ್ವಾಗತ ಸ್ವೀಕರಿಸಿ ಕಾಞಂಗಾಡ್ ಆನಂದಾಶ್ರಮದಲ್ಲಿ ರಥಯಾತ್ರೆ ಸಮಾಪ್ತಿಗೊಂಡಿತು. ಇಂದು ರಥಯಾತ್ರೆಯು ಕಣ್ಣೂರು ಜಿಲ್ಲೆ ಪ್ರವೇಶಿಸಲಿದೆ. ಕರಿವೆಳ್ಳೂರ್, ಪಯ್ಯನ್ನೂರ್, ಎಜಿಲೋಡ್, ಶ್ರೀರಾಘವಪುರಂ, ತಳಿಪರಂಬ್, ಪಲ್ಲಿಕ್ಕುಳಂ, ಪಲ್ಲಿಕುನ್ನು ಮತ್ತು ಥಲಾಪ್‍ನಲ್ಲಿ ಸ್ವಾಗತ ನಡೆದು ನಂತರ ಕಣ್ಣೂರಿನಲ್ಲಿ ಸಮಾಪನಗೊಳ್ಳಲಿದೆ.
ಶ್ರೀರಾಮ ನವಮಿ ಯಾತ್ರೆಗೆ ಕಾಸರಗೋಡಲ್ಲಿ ಭಕ್ತಿಪೂರ್ವಕ ಸ್ವಾಗತ
0
ಮಾರ್ಚ್ 10, 2023