ನಿಮಗೆ "ಕೃಷ್ಣ ಹಾಗೂ ಅಭಿಮನ್ಯುವಿನ ಕಥೆ ಗೊತ್ತಿದ್ಯಲ್ಲ. ಅಭಿಮನ್ಯು ತನ್ನ ತಾಯಿ ಸುಭದ್ರೆ ಗರ್ಭದಲ್ಲಿರಬೇಕಾದರೆ ಕೃಷ್ಣ ಹೇಳಿದ ಚಕ್ರವ್ಯೂಹವನ್ನು ಭೇಧಿಸುವ ಕಥೆಯನ್ನ ಆಲಿಸಿದ್ದನು".
ಗರ್ಭಿಣಿಯಾಗಿರುವಾಗ ನೀವು ಎಂದಾದರೂ ನಿಮ್ಮ ಮಗುವಿನ ಜೊತೆಗೆ ಮಾತನಾಡಿದ್ದೀರಾ..? ಅಧ್ಯಯನಗಳ ಪ್ರಕಾರ ಹೊಟ್ಟೆಯೊಳಗಡೆ ಇರುವ ಭ್ರೂಣದ ಜೊತೆಗೆ ಮಾತನಾಡುವುದರಿಂದ ತಾಯಿ ಹಾಗೂ ಮಗುವಿನ ಮಧ್ಯೆ ಒಂದು ಒಳ್ಳೆಯ ಒಡನಾಟ ಸೃಷ್ಟಿಯಾಗುತ್ತಂತೆ. ನಿಧಾನವಾಗಿ ಮಗು ನಿಮ್ಮ ಧ್ವನಿಯನ್ನ ಗುರುತಿಸುತ್ತಂತೆ. ಹೀಗಾಗಿ ಮಗು ಹೊರ ಬಂದ ಮೇಲೆ ತಾಯಿ-ಮಗುವಿನಲ್ಲಿ ಒಂದೊಳ್ಳೆ ಬಾಂಡ್ ಸೃಷ್ಟಿಯಾಗಲಿದೆಯಂತೆ.ಗರ್ಭಿಣಿಯಾಗಿರುವಾಗ ನೀವು ಎಂದಾದರೂ ನಿಮ್ಮ ಮಗುವಿನ ಜೊತೆಗೆ ಮಾತನಾಡಿದ್ದೀರಾ..? ಅಧ್ಯಯನಗಳ ಪ್ರಕಾರ ಹೊಟ್ಟೆಯೊಳಗಡೆ ಇರುವ ಭ್ರೂಣದ ಜೊತೆಗೆ ಮಾತನಾಡುವುದರಿಂದ ತಾಯಿ ಹಾಗೂ ಮಗುವಿನ ಮಧ್ಯೆ ಒಂದು ಒಳ್ಳೆಯ ಒಡನಾಟ ಸೃಷ್ಟಿಯಾಗುತ್ತಂತೆ. ನಿಧಾನವಾಗಿ ಮಗು ನಿಮ್ಮ ಧ್ವನಿಯನ್ನ ಗುರುತಿಸುತ್ತಂತೆ. ಹೀಗಾಗಿ ಮಗು ಹೊರ ಬಂದ ಮೇಲೆ ತಾಯಿ-ಮಗುವಿನಲ್ಲಿ ಒಂದೊಳ್ಳೆ ಬಾಂಡ್ ಸೃಷ್ಟಿಯಾಗಲಿದೆಯಂತೆ.
ಗರ್ಭದೊಳಗಿರುವ ಭ್ರೂಣ ನಿಜವಾಗಲು ನಿಮ್ಮ ಮಾತು ಕೇಳುತ್ತಾ?
ಸರಿ ಸುಮಾರು 14 ವಾರಗಳ ನಂತರ ಭ್ರೂಣವು ನಿಮ್ಮ ಧ್ವನಿ ಆಲಿಸಲು ಶುರು ಮಾಡುತ್ತದೆ. ಪ್ರತಿ ನಿತ್ಯ ಪೋಷಕರು 15 ನಿಮಿಷಗಳ ಕಾಲ ಮಗುವಿನ ಜೊತೆಗೆ ಸಂಭಾಷಣೆ ನಡೆಸಬೇಕು. ಈ ವೇಳೆ ಹೊಟ್ಟೆಯನ್ನ ನಯವಾಗಿ ಸವರಬೇಕು ಇದರಿಂದಾಗಿ ಮಗುವಿನ ಜೊತೆಗೆ ಉತ್ತಮ ಬಾಂಡಿಂಗ್ ಸೃಷ್ಟಿಯಾಗುತ್ತದೆ. ಈ ಹಿಂದೆ ಹೊಟ್ಟೆಯ ಭಾಗಕ್ಕೆ ಹೆಡ್‌ಫೋನ್ ಇಟ್ಟು ಮಗುವಿಗೆ ಹಾಡನ್ನು ಕೇಳಿಸಲಾಗುತ್ತಿತ್ತು. ಆದರೆ ಅದಕ್ಕಿಂತಲೂ ಪೋಷಕರು ಮಗುವಿನ ಜೊತೆಗೆ ಮಾತನಾಡುವುದೇ ಉತ್ತಮ ಎಂದು ಹೇಳಲಾಗಿದೆ.
ಭ್ರೂಣದ ಜೊತೆಗೆ ಮಾತನಾಡುವ ವಿಧಾನ ಹೇಗೆ?
ಹೊಟ್ಟೆಯೊಳಗಡೆ ಇರುವ ಮಗುವಿನ ಜೊತೆಗೆ ಹೇಗೆ ಮಾತನಾಡಬೇಕು ಎನ್ನುವುದಕ್ಕೆ ಇಲ್ಲಿದೆ ಸಿಂಪಲ್ ಟಿಪ್ಸ್.
* ಮೊದ ಮೊದಲು ನಿಮಗೆ ಈ ಅನುಭವ ವಿಚಿತ್ರ ಅನ್ನಿಸಬಹುದು. ಆದರೆ ನೀವು ಒಬ್ಬರೆ ಇರುವಾಗಲೆಲ್ಲ ಈ ರೀತಿ ಮಾತನಾಡುತ್ತಾ ಇರಿ. ನಿಮ್ಮ ದಿನನಿತ್ಯ ಚಟುವಟಿಕೆಗಳ ಬಗ್ಗೆ ನಿಮ್ಮ ಮಗುವಿನ ಜೊತೆಗೆ ಶೇರ್ ಮಾಡಿ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ. ನಿಧಾನವಾಗಿ ತಾಯಿ-ಮಗುವಿನ ಮಧ್ಯೆ ಒಂದು ಸುಂದರ ಬಂಧ ಸೃಷ್ಟಿಯಾಗುತ್ತದೆ.
* ಗರ್ಭದಲ್ಲಿರುವ ಭ್ರೂಣಕ್ಕೆ ಹಾಡು ಕೇಳಿಸುವುದರ ಬದಲು ನೀವೆ ಹಾಡಲು ಶುರು ಮಾಡಿ. ನಿಮ್ಮ ಧ್ವನಿ ಚೆನ್ನಾಗಿಲ್ಲ ಅಂದ್ರೂ ಪರವಾಗಿಲ್ಲ. ಒಟ್ಟಿನಲ್ಲಿ ಮಗು ನಿಮ್ಮ ಧ್ವನಿಗೆ ಒಗ್ಗಿಕೊಳ್ಳಬೇಕು ಅಷ್ಟೇ.
* ನಿಮ್ಮ ಹೊಟ್ಟೆಯ ಮೇಲೆ ನಿಧಾನವಾಗಿ ಕೈ ಸವರುತ್ತಾ ಮಗುವಿನ ಜೊತೆಗೆ ಮಾತನಾಡಿ. ಈ ನಿಮ್ಮ ಸ್ಪರ್ಶವನ್ನು ಮಗು ಅನುಭವಿಸುತ್ತದೆ. ತಂದೆಯೂ ಕೂಡ ಇದೇ ರೀತಿ ಮಗುವನ್ನು ಮಾತನಾಡಿಸುವುದರಿಂದ ಮಗು ನಿಮ್ಮ ಅನುಪಸ್ಥಿತಿಯನ್ನು ಕಂಡುಕೊಳ್ಳುತ್ತದೆ.
* ಗರ್ಭಿಣಿ ತಾಯಿ ಏನನ್ನು ತಿನ್ನುತ್ತಾಳೋ ಮಗು ಕೂಡ ಅದನ್ನೇ ತಿನ್ನುತ್ತದೆ ಎಂಬ ನಂಬಿಕೆ ಇದೆ. ಅದೇ ರೀತಿ ನೀವು ಆಹಾರವನ್ನು ಸೇವಿಸುವಾಗ ಮಗುವಿನ ಹೊಟ್ಟೆಯನ್ನು ಮುಟ್ಟಿ ಆಹಾರ ಇಷ್ಟವಾಯಿತಾ ಎಂದು ಕೇಳಿ. ಈ ರೀತಿ ಬಾಂಡಿಂಗ್ ಸೃಷ್ಟಿಯಾಗುತ್ತದೆ. ಅಷ್ಟೇ ಅಲ್ಲ, 4 ವಾರಗಳ ನಂತರ ಭ್ರೂಣವು ಆಹಾರವನ್ನು ಮೊದಲ ಬಾರಿಗೆ ರುಚಿ ನೋಡುತ್ತಂತೆ.
* ಬಿಡುವಿನ ಸಮಯದಲ್ಲಿ ನಿಮ್ಮ ಜೊತೆಗೆ ನಿಮ್ಮ ಹೊಟ್ಟೆಯಲ್ಲಿರುವ ಮಗುವಿಗೂ ಹಿತವಾದ ಸಂಗೀತವನ್ನು ಆಲಿಸಿ.
* ನಿಮ್ಮ ಭಾವನೆಗಳನ್ನು ಮಗುವಿನೊಂದಿಗೆ ಹಂಚಿಕೊಳ್ಳಿ. ನೀವು ಒತ್ತಡದಿಂದಿದ್ದರೆ ಮಗುವು ಆ ಒತ್ತಡವನ್ನು ಅನುಭವಿಸುತ್ತದೆ. ಆದ್ದರಿಂದ ಹಿತವಾದ ಧ್ವನಿಯಲ್ಲಿ ಮಗುವನ್ನು ಶಾಂತಗೊಳಿಸಿ. ನಿಮ್ಮ ಸಂತೋಷ ಅಥವಾ ದುಃಖವನ್ನು ಮಗುವಿನೊಂದಿಗೆ ಹಂಚಿಕೊಳ್ಳಿ.
ಅಧ್ಯಯನಗಳ ಪ್ರಕಾರ ಮಗುವು ಹೊಟ್ಟೆಯಲ್ಲಿರಬೇಕಾದರೆ ಎಲ್ಲಾ ತರಹದ ಧ್ವನಿಯನ್ನು ಕೇಳಿಸಿಕೊಳ್ಳುತ್ತದೆ. ಆದ್ದರಿಂದ ಮುಂದೆ ನೀವು ಪೋಷಕರಾಗುವ ಸಂದರ್ಭದಲ್ಲಿ ನಾವು ಕೊಟ್ಟ ಟಿಪ್ಸ್‌ಗಳನ್ನು ಖಂಡಿತ ಪಾಲಿಸಬಹುದು.