ನವದೆಹಲಿ: ವೆಡ್ಡಿಂಗ್ ಫೋಟೋಗ್ರಾಫರ್ ಒಬ್ಬನ ಮದುವೆ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಕಾರಣ ಆತ ತನ್ನ ಮದುವೆ ದಿನವೂ ಕಾಯಕ ಮರೆಯದಿರುವುದು.
ಮದುವೆ ಸಂಭ್ರಮದ ನಡುವೆ, ತನ್ನ ಆಲೋಚನೆಗೆ ತಕ್ಕಂತೆ ಪತ್ನಿಯ ಫೋಟೋ ತೆಗೆದಿದ್ದಾನೆ. ವರ ಶ್ರದ್ಧೆಯಿಂದ ತನ್ನ ಕಾಯಕದಲ್ಲಿ ನಿರತನಾಗಿರುವುದನ್ನು ಆತನ ಸ್ನೇಹಿಯರು ವಿಡಿಯೋ ಮಾಡಿದ್ದಾರೆ. ಬಳಿಕ ಇನ್ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ
ವೈರಲ್ ಆಗಿರುವ ಈ ವಿಡಿಯೋ ಈಗಾಗಲೇ 3.2 ಮಿಲಿಯನ್ಗೂ ಹೆಚ್ಚು ವೀಕ್ಷಣೆ
ಪಡೆದುಕೊಂಡಿದೆ. ಈ ವೇಳೆ ನೆಟ್ಟಿಗರು ನವದಂಪತಿಗಳಿಗೆ ಶುಭಾಶಯ ತಿಳಿಸಿದ್ದಾರೆ. ಇದಲ್ಲದೆ
ಕೆಲ ನೆಟ್ಟಿಗರು ವೆಡ್ಡಿಂಗ್ ಫೋಟೋಗ್ರಾಫರ್ ಅಯಾನ್ನ್ನು ತಮಾಷೆಯಾಗಿ
ಕಾಲೆಳೆದಿದ್ದಾರೆ.