ಕಠ್ಮಂಡು: ಏರ್ ಇಂಡಿಯಾ-ನೇಪಾಳ ಏರ್ಲೈನ್ಸ್ ನಡುವಿನ ದುರಂತ ಪೈಲಟ್ಗಳ ಸಮಯ ಪ್ರಜ್ಷೆಯಿಂದ ಕ್ಷಣಾರ್ಧದಲ್ಲೇ ತಪ್ಪಿದ್ದು ದೊಡ್ಡ ದುರಂತದಿಂದ ಪಾರಾಗಲಾಗಿದೆ.
ಶುಕ್ರವಾರ ಬೆಳ್ಳಗೆ ದೆಹಲಿಯಿಂದ ಕಾಟ್ಮಂಡು ಕಡೆಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನವು, ಕೌಲಲಾಂಪುರದಿಂದ ಕಾಟ್ಮಂಡು ಕಡೆಗೆ ಬರುತ್ತಿದ್ದ ನೇಪಾಳ ಏರ್ಲೈನ್ಸ್ಗೆ ಸೇರಿದ್ದ A-320 ವಿಮಾನದ ನಡುವೆ ಡಿಕ್ಕಿಯಾಗುವುದು ಸ್ವಲ್ಪದರಲ್ಲೇ ತಪ್ಪಿದೆ.
ಏರ್ ಇಂಡಿಯಾ ವಿಮಾನವು 19,000 ಅಡಿ ಅಂತರದಲ್ಲಿ ಹಾರುತ್ತಿದ್ದ ಸಮಯದಲ್ಲಿ ನೇಪಾಳ ಏರ್ಲೈನ್ಸ್ ವಿಮಾನವು 15,000 ಅಡಿ ಅಂತರದಲ್ಲಿ ಹಾರಾಡುತ್ತಿತ್ತು ಎಂದು ತಿಳಿದು ಬಂದಿದೆ. ಎರಡು ವಿಮಾನಗಳು ಹತ್ತಿರದಲ್ಲಿರುವ ಬಗ್ಗೆ ರಾಡಾರ್ನಲ್ಲಿ ತೋರಿಸಿದ ಕಾರಣ ನೇಪಾಳ ಏರ್ಲೈನ್ಸ್ ವಿಮಾನವು 7,000 ಅಡಿಗಳಿಗೆ ಕೆಳಗಿಳಿಯಿತ್ತು ಮತ್ತು ದುರಂತ ತಪ್ಪಿತ್ತು ಎಂದು ನೇಪಾಳ ನಾಗರೀಕ ವಿಮಾನಯಾನ ಪ್ರಾಧಿಕಾರ(CAAN)ದ ವಕ್ತಾರರು ತಿಳಿಸಿದ್ಧಾರೆ.
ಘಟನೆ ಸಂಬಂಧ CAAN ತನಿಖೆಗೆ ಆದೇಶಿಸಿದ್ದು ನಿಯಂತ್ರಣ ಕೊಠಡಿಯ ಮೂವರು ಅಧಿಕಾರಿಗಳನ್ನು ಅಮಾನತ್ತು ಮಾಡಿರುವುದಾಗಿ ತಿಳಿಸಿದೆ.