HEALTH TIPS

ಚಿನ್ನ ಕಳ್ಳಸಾಗಣೆ ಪ್ರಕರಣ ಇತ್ಯರ್ಥಕ್ಕೆ ಯತ್ನ!; ಸದ್ಯದಲ್ಲೇ ಸ್ವಪ್ನಾ ಸುರೇಶ್ ರಿಂದ ಸಮಗ್ರ ಮಾಹಿತಿ


               ತಿರುವನಂತಪುರಂ: ಚಿನ್ನ ಕಳ್ಳಸಾಗಣೆ ಪ್ರಕರಣವನ್ನು ತೆರೆಮರೆಯಲ್ಲಿ ಇತ್ಯರ್ಥಪಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸ್ವಪ್ನಾ ಸುರೇಶ್ ಹೇಳಿದ್ದಾರೆ. ಕೆಲವರು ತನ್ನ ಜೊತೆ ಇತ್ಯರ್ಥಕ್ಕೆ ಯತ್ನಿಸಿದ್ದು, ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಸ್ವಪ್ನಾ ಸುರೇಶ್ ಹೇಳಿದ್ದಾರೆ.
             ಫೇಸ್‍ಬುಕ್ ಮೂಲಕ ಸ್ವಪ್ನಾ ಈಬಗ್ಗೆ ಬಹಿರಂಗಪಡಿಸಿದ್ದಾರೆ. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಇತ್ಯರ್ಥಕ್ಕೆ ನಡೆದ ತೆರೆಮರೆ ಖಾರಸ್ಥಾನದ ಬಗ್ಗೆ ಹೇಳಲಾಗಿದೆ. ಅದೂ ನನ್ನ ಹತ್ತಿರ. ಸಂಜೆ 5 ಗಂಟೆಗೆ ಮಾಹಿತಿಯೊಂದಿಗೆ ಲೈವ್ ಬರುತ್ತೇನೆ’ ಎಂದು ಸ್ವಪ್ನಾ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಲೈಫ್ ಮಿಷನ್ ಪ್ರಕರಣದಲ್ಲಿ ಮುಖ್ಯಮಂತ್ರಿಯವರ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಸಿ.ಎಂ.ರವೀಂದ್ರನ್ ಅವರನ್ನು ಇಡಿ ವಿಚಾರಣೆಗೊಳಪಡಿಸಿದ ಬಳಿಕ ಸ್ವಪ್ನಾ ಅವರ ಈ ವಿಷಯ ಬಹಿರಂಗವಾಗಿದೆ.
            ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಸ್ವಪ್ನಾ ಶುಭಾಶಯಗಳನ್ನು ಕಳಿಸಿದ್ದು ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದವು. ಅವರು ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ವಿರುದ್ಧ ಹೋರಾಡುವ ಮಹಿಳೆ. ಇಲ್ಲಿಯವರೆಗೆ ಮಹಿಳೆಯೊಬ್ಬರು ಸೋತಿದ್ದಾರೆ ಎಂದು ಮುಖ್ಯಮಂತ್ರಿ ಖುಷಿ ಪಡಬಹುದು. ಆದರೆ ಒಂದಲ್ಲ ಒಂದು ದಿನ ಲೋಕದಲ್ಲಿ ನಿಷ್ಪ್ರಯೋಜಕ ಮನುಷ್ಯನ ದಿನವನ್ನು ಆಚರಿಸುತ್ತಾರೆ. ಇತಿಹಾಸ ಮತ್ತೊಮ್ಮೆ ಮರುಕಳಿಸಲಿದೆ ಎಂದು ಸ್ವಪ್ನಾ ಸುರೇಶ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು.
             ಏತನ್ಮಧ್ಯೆ, ಲೈಫ್ ಮಿಷನ್ ಹಗರಣದ ಕಪ್ಪುಹಣ ಪ್ರಕರಣದಲ್ಲಿ ಸಿಎಂ ರವೀಂದ್ರನ್ ಅವರನ್ನು ಜಾರಿ ನಿರ್ದೇಶನಾಲಯ ಮತ್ತೆ ಪ್ರಶ್ನಿಸಲಿದೆ. ಪ್ರಕರಣದಲ್ಲಿ ಕಳೆದ ಎರಡು ದಿನಗಳಲ್ಲಿ ಇಡಿ ರವೀಂದ್ರನ್ ಅವರನ್ನು 20 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಇದರಲ್ಲಿ ರವೀಂದ್ರನ್ ಅವರ ಉತ್ತರಗಳನ್ನು ಸ್ಪಷ್ಟಪಡಿಸಲು ಮತ್ತೆ ಕರೆಯಲಾಗುತ್ತಿದೆ. ಲೈಫ್ ಮಿಷನ್ ಲಂಚಕ್ಕೆ ಸಂಬಂಧಿಸಿದ ಎಲ್ಲಾ ದಾರಿ ತಪ್ಪಿದ ಕ್ರಮಗಳು ಸಿಎಂ ರವೀಂದ್ರನ್ ಅವರ ಅರಿವಿನಿಂದ ಆಗಿವೆ ಎಂದು ಸ್ವಪ್ನಾ ಹೇಳಿಕೆ ನೀಡಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries