HEALTH TIPS

ಅವಳಂತೆ ವೇಷ ಧರಿಸಿದ ಅವನಿಗೆ ಮೊದಲ ಬಹುಮಾನ! ಏನಿದು ಸ್ಪರ್ಧೆ?

            ಕೊಲ್ಲಂ: ಭಾರತದ ಯಾವುದೇ ರಾಜ್ಯಗಳಿಗೆ ಭೇಟಿ ನೀಡಿದರೂ ಅಲ್ಲೊಂದು ವಿಶೇಷ ಮತ್ತು ಆಸಕ್ತಿದಾಯಕವಾದ ಆಚರಣೆಗಳು, ನಂಬಿಕೆಗಳನ್ನು ಕಾಣಬಹುದು. ಕೆಲವೊಂದು ವಿಚಿತ್ರ ಎಂದೆನಿಸಿದರೂ, ಅಲ್ಲಿನ ಸ್ಥಳೀಯ ಜನರು ಮಾತ್ರ ಆಚರಣೆಗಳನ್ನು ಅಪಾರವಾದ ನಂಬಿಕೆಗಳಿಂದ ಆಚರಿಸಿಕೊಂಡು ಬರುತ್ತಾರೆ.

                  ಕೇರಳ ರಾಜ್ಯವನ್ನು ದೇವರ ನಾಡು ಎಂದು ಖ್ಯಾತಿ ಹೊಂದಿದೆ. ಹೀಗಾಗಿ ರಾಜ್ಯದ ಯಾವುದೇ ಭಾಗಗಳಿಗೆ ಹೋದರೂ ವಿಶೇಷವಾದ ಆಚರಣೆಗಳನ್ನು ಕಾಣಬಹುದು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕೊಲ್ಲಂ ಜಿಲ್ಲೆಯಲ್ಲಿ ನಡೆದ ಚಮಯವಿಳಕ್ಕು ಹಬ್ಬದ ಬಗ್ಗೆ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ಭಾರತೀಯ ರೈಲ್ವೇ ಅಧಿಕಾರಿ ಅನಂತ್ ರೂಪನಗುಡಿ ಅವರು ಟ್ವಟಿರ್​​ನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋ.

                 ಕೊಲ್ಲಂ ಜಿಲ್ಲೆಯ ಕೊಟ್ಟಂಕುಲಕರದಲ್ಲಿರುವ ದೇವಿ ದೇವಾಲಯದಲ್ಲಿ ಚಮಯವಿಳಕ್ಕು ಉತ್ಸವ ನಡೆದುಕೊಂಡು ಬರುತ್ತಿದೆ. ಈ ಸಂದರ್ಭದಲ್ಲಿ ಪುರುಷರು ಮಹಿಳೆಯರಂತೆ ವೇಷ ತೊಟ್ಟು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಇದೇ ವೇಳೆ ಸ್ಪರ್ಧೆ ಏರ್ಪಡಿಸಿ ಆಕರ್ಷಕವಾಗಿ ಸಿಂಗರಿಸಿಕೊಂಡವರಿಗೆ ಬಹುಮಾನ ನೀಡಲಾಗುತ್ತದೆ. ಚಮಯವಿಳಕ್ಕು ಉತ್ಸವವು ತೃತೀಯ ಲಿಂಗಿ ಸಮುದಾಯಕ್ಕೆ ಸೇರಿದವರ ಅತೀ ದೊಡ್ಡ ಹಬ್ಬವಾಗಿ ಖ್ಯಾತಿ ಪಡೆದುಕೊಂಡಿದೆ ಎಂದು ವರದಿಯಾಗಿದೆ. 

                 ಸದ್ಯ ಅನಂತ್ ರೂಪನಗುಡಿ ಅವರು ಚಮಯವಿಳಕ್ಕು ಹಬ್ಬದ ವೇಳೆ ಆಯೋಜನೆಯಾಗಿದ್ದ ಸ್ಪರ್ಧೆಯಲ್ಲಿ ಆಕರ್ಷಕವಾಗಿ ಸಿಂಗರಿಸಿಕೊಂಡು ಪ್ರಥಮ ಬಹುಮಾನ ಪಡೆದ ಸ್ಪರ್ಧಿಯ ಫೋಟೋ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ನಿಜಕ್ಕೂ ಸ್ತ್ರೀಯಂತೆಯೇ ಕಾಣುತ್ತಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

               ಉತ್ಸವದಲ್ಲಿ ಪುರುಷರು ತಮ್ಮ ಕೈಯಲ್ಲಿ ದೀಪಗಳನ್ನು ಹಿಡಿದುಕೊಂಡು ಮಹಿಳೆಯರಂತೆ ವೇಷಧರಿಸಿ ಮೆರವಣಿಗೆಯನ್ನು ಹೊರಡುತ್ತಾರೆ. ರಾಜ್ಯದಾದ್ಯಂತ ಪುರುಷರು ಈ ವಿಶಿಷ್ಟ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಸ್ತ್ರೀವೇಷಧಾರಿ ಪುರುಷರು ದೀಪ ಹಿಡಿದು ದೇವಾಲಯದ ಸುತ್ತಲೂ ತಮ್ಮ ಭಕ್ತಿಯ ಸಂಕೇತವಾಗಿ ಪ್ರದಕ್ಷಿಣೆ ಬರುತ್ತಾರೆ ಎಂದು ಕೇರಳ ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್​ನಲ್ಲಿ ದಾಖಲಾಗಿದೆ.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries