ಕಾಸರಗೋಡು: ಮಳೆಗಾಲ ಪೂರ್ವ ಸ್ವಚ್ಛತಾ ಕಾರ್ಯದ ಅಂಗವಾಗಿ ಬೇಡಡ್ಕ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳನ್ನು ಶುಚಿಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಪಂಚಾಯಿತಿ ಆರೋಗ್ಯ ಜಾಗೃತ ಸಮಿತಿ ಹಾಗೂ ವಾರ್ಡ್ ಆರೋಗ್ಯ ರಕ್ಷಣಾ ಸಮಿತಿ ನೇತೃತ್ವದಲ್ಲಿ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಕಾರ್ಯ ಆರಂಭಿಸಲಾಯಿತು. ಕರಿಚ್ಚೇರಿಯಿಂದ ಆರಂಭಗೊಂಡು ಪಳ್ಳತ್ತಿಂಗಾಲ್ ವರೆಗೆ ಶುಚೀಕರಣ ಕಾರ್ಯ ನಡೆಸಲಾಯಿತು.
ಪ್ಲಾಸ್ಟಿಕ್ ನಿಷೇಧಿತ ಉತ್ಪನ್ನಗಳ ಮಾರಾಟವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದರ ಜತೆಗೆ ವಿವಿಧ ಆಚರಣೆಗಳು ಮತ್ತು ಹಬ್ಬಗಳ ಸಂದರ್ಭದಲ್ಲಿ ಹಸಿರು ಪೆÇ್ರೀಟೋಕಾಲ್ ಅನುಸರಿಸುವಂತೆ ಪಂಚಾಯಿತಿ ಅಧಿಕಾರಿಗಳು ಸಊಚನೆ ನೀಡಿದ್ದಾರೆ. ಸಂಭ್ರಮಾಚರಣೆಯನ್ನು ಆಯೋಜಿಸುವವರು ಪಂಚಾಯಿತಿಗೆ ಸಂಬಂಧಪಟ್ಟ ನೋಡಲ್ ಅಧಿಕಾರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು. ಸಾರ್ವಜನಿಕಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಸ್ವಂತ ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದೂ ಪಂಚಾಯತ್ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ತಿಳಿಸಿದರು.
ಮಳೆಗಾಲಪೂರ್ವ ತಯಾರಿ-ಬೇಡಡ್ಕ ಪಂಚಾಯಿತಿ ವತಿಯಿಂದ ಸಾರ್ವಜನಿಕ ಸ್ಥಳಗಳ ಶುಚೀಕರಣ ಕಾರ್ಯಕ್ಕೆ ಚಾಲನೆ
0
ಮಾರ್ಚ್ 27, 2023