ಕುಂಬಳೆ: ಅಡುಗೆ ಅನಿಲ ಬೆಲೆ ಏರಿಕೆಯನ್ನು ವಿರೋಧಿಸಿ ಕೇರಳ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಶನ್ ಕುಂಬಳೆ ಘಟಕದ ಆಶ್ರಯದಲ್ಲಿ ಕುಂಬಳೆ ಪೇಟೆಯಲ್ಲಿ ಬುಧವಾರ ರಾತ್ರಿ ಪಂಜಿನ ಪ್ರತಿಭಟನಾ ಮೆರವಣಿಗೆ ನಡೆಯಿತು. ಜಿಲ್ಲಾಧ್ಯಕ್ಷ ಅಬ್ದುಲ್ಲಾ ತಾಜ್ ಮಾತನಾಡಿ, ಹೋಟೆಲ್ ಕ್ಷೇತ್ರ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಹೊತ್ತಿನಲ್ಲಿ ಅನಿಯಂತ್ರಿತವಾಗಿ ಅಡುಗೆ ಅನಿಲ ಬೆಲೆ ಏರಿಕೆ ಮಾಡಿರುವುದು ಜನಸಾಮಾನ್ಯರ ಮೇಲಿನ ಸರ್ಕಾರದ ಕ್ರೌರ್ಯವಾಗಿದೆ ಎಂದು ಟೀಕಿಸಿದರು.
ಘಟಕದ ಅಧ್ಯಕ್ಷ ರಾಮ ಭಟ್ ಗೋಕುಲ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೆಹಮಾನ್ ಇಟಾಲಿಯನ್, ಸವಾದ್ ತಾಜ್, ವೆಂಕಟೇಶ್ವರ ಹೆಬ್ಬಾರ್ ಕೃಷ್ಣ ಭವನ, ಮಮ್ಮು ಮುಬಾರಕ್, ಮುನೀರ್ ಸ್ಟಾರ್, ಫಾಜಿಲ್ ಮಲಬಾರ್, ಅರಾಫತ್ ಕುಬಾ, ರಿಜ್ವಾನ್ ತಾಜ್, ನಿಜಾಮ್ ಬದ್ರಿಯಾ ಮತ್ತಿತರರು ಭಾಗವಹಿಸಿದ್ದರು.