ತಿರುವನಂತಪುರಂ: ರಾಜ್ಯದಲ್ಲಿ ಇಂದಿನಿಂದ ಬೇಸಿಗೆ ಮಳೆಯಾಗುವ ಸಾಧ್ಯತೆ ಇದೆ. ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬಿಸಿಲ ಬೇಗೆಯಲ್ಲಿ ಬೇಯುತ್ತಿರುವ ಕೇರಳಕ್ಕೆ ಬೇಸಿಗೆ ಮಳೆ ನೆಮ್ಮದಿ ತರಲಿದೆ. ಮಧ್ಯ ಕೇರಳ ಮತ್ತು ದಕ್ಷಿಣ ಕೇರಳದ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ.
ಬುಧವಾರದ ವೇಳೆಗೆ ಹೆಚ್ಚಿನ ಸ್ಥಳಗಳಲ್ಲಿ ಬೇಸಿಗೆ ಮಳೆಯಾಗುವ ನಿರೀಕ್ಷೆಯಿದೆ. ಬೇಸಿಗೆಯ ಕಾವು ಹೆಚ್ಚಾಗುತ್ತಿದ್ದಂತೆ ಹಲವೆಡೆ ಕುಡಿಯುವ ನೀರಿನ ತತ್ವಾರ ತೀವ್ರಗೊಂಡಿದೆ. ರಾಜ್ಯದ ಹಲವು ನದಿಗಳು ಬತ್ತಿ ಹೋಗಿವೆ.
ಏತನ್ಮಧ್ಯೆ, ಸ್ವಯಂಚಾಲಿತ ಹವಾಮಾನ ಕೇಂದ್ರದ ಪ್ರಕಾರ, ಪಾಲಕ್ಕಾಡ್ ಜಿಲ್ಲೆಯ ಎರಿಮಯೂರ್ ಪ್ರದೇಶದಲ್ಲಿ ನಿನ್ನೆ ರಾಜ್ಯದಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ಈ ಪ್ರದೇಶದಲ್ಲಿ ನಿನ್ನೆ 41.1 ಡಿಗ್ರಿ ಸೆಲ್ಸಿಯಸ್ ಉμÁ್ಣಂಶ ದಾಖಲಾಗಿದೆ.
ಬೇಗೆಗೆ ಬ್ರೇಕ್ ನಿರೀಕ್ಷೆ!; ಇಂದಿನಿಂದ ಕೇರಳದಲ್ಲಿ ಬೇಸಿಗೆ ಮಳೆಯಾಗುವ ಸಾಧ್ಯತೆ
0
ಮಾರ್ಚ್ 12, 2023
Tags