ನವದೆಹಲಿ : ಮನುಸ್ಮೃತಿ ಹಲವು ವಿವಾದಗಳಿಗೆ ಒಳಗಾದ ಗ್ರಂಥ. ಈ ಗ್ರಂಥವನ್ನು ಹಲವು ಬಾರಿ ಸುಟ್ಟು ಹಾಕಲಾಗಿದೆ. ಈ ಗ್ರಂಥಧಲ್ಲಿ ಜಾತಿ ವ್ಯವಸ್ಥೆ ಬಗ್ಗೆ ವಿವರಿಸಲಾಗಿದೆ. ಇಂತಹ ಮನುಸ್ಮೃತಿ ಅನ್ವಯಿಕತೆ ಬಗ್ಗೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಧರ್ಮಶಾಸ್ತ್ರ ಹಾಗೂ ತತ್ವಶಾಸ್ತ್ರ ವಿಭಾಗ ಸಂಶೋಧನೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಈ ಸಂಶೋಧನೆಯನ್ನು ಕೆಲವು ಶಿಕ್ಷಣ ತಜ್ಞರು ಪ್ರಶ್ನಿಸಿದ್ದಾರೆ. ಮನುಸ್ಮೃತಿ ಪ್ರತಿನಿಧಿಸುವ ಸಾಮಾಜಿಕ ವ್ಯವಸ್ಥೆಗೆ ಆಧುನಿಕ ಸಮಾಜದಲ್ಲಿ ಸ್ಥಾನವಿಲ್ಲ ಎಂದು ಅವರು ಹೇಳಿದ್ದಾರೆ. ಶಂಕರ್ ಕುಮಾರ್ ಮಿಶ್ರಾ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಥಿಯಾಲಜಿ ಹಾಗೂ ಫಿಲಾಸಫಿ ವಿಭಾಗದ ಮುಖ್ಯಸ್ಥರು. ಅವರು ಸಂಶೋಧನಾ ಯೋಜನೆಯ ಪ್ರಧಾನ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮನುಸ್ಮೃತಿ ಈಗಾಗಲೇ ವಿಭಾಗದ ಪಠ್ಯ ಕ್ರಮವಾಗಿದೆ. ಮನುಸ್ಮೃತಿಯ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರದ ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ ಯೋಜನೆಯ ನಿಧಿಯ ಅಡಿಯಲ್ಲಿ ವಿಶ್ವವಿದ್ಯಾನಿಲಯ ಈ ಸಂಶೋಧನಾ ಯೋಜನೆಗೆ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.